ಬೆಂಗಳೂರು : ಸುಮಾರು 27 ಕೋಟಿ ರೂಪಾಯಿ ತೆರಿಗೆ ಪಾವತಿಸದ ಹಿನ್ನೆಲೆ ನಗರದ ಪ್ರತಿಷ್ಠಿತ ಮಂತ್ರಿಮಾಲ್‍ಗೆ ಇಂದು ಮತ್ತೆ ಬಿಬಿಎಂಪಿ ಬೀಗ ಜಡಿದಿದೆ.
2018ರಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟದೆ ವಂಚಿಸಿದೆ. ಇನ್ನು 2018ರಿಂದ ಈವರೆಗೆ 27 ಕೋಟಿ ಹಣವನ್ನ ಮಾಲ್ ಬಾಕಿ ಉಳಿಸಿಕೊಂಡಿದೆ. ಹೀಗಾಗಿ, ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ನೇತೃತ್ವದಲ್ಲಿ ಮಂತ್ರಿ ಮಾಲ್‌ಗೆ ಬೀಗ ಹಾಕಲಾಗಿದೆ. ಒಂದೇ ವರ್ಷದಲ್ಲಿ ಬಿಬಿಎಂಪಿ ಮೂರನೇ ಬಾರಿ ಬೀಗ ಹಾಕಿದೆ.
ಮೂರು ವರ್ಷದ ಆಸ್ತಿ ತೆರಿಗೆ 36 ಕೋಟಿ ಕಟ್ಟಬೇಕಿತ್ತು. ಅಕ್ಟೋಬರ್ ನಲ್ಲಿ ಬೀಗ ಹಾಕಿದಾಗ ತಾತ್ಕಾಲಿಕವಾಗಿ 5 ಕೋಟಿ ಡೆಪಾಸಿಟ್ ಮಾಡಿದ್ರು. ಉಳಿದ ಬಾಕಿ 31 ಕೋಟಿಯನ್ನ ಅಕ್ಟೋಬರ್ ಅಂತ್ಯಕ್ಕೆ ಪಾವತಿ ಮಾಡೋದಾಗಿ ಡೆಡ್ ಲೈನ್ ಪಡೆದಿದ್ರು. ಆದರೆ ಅಕ್ಟೋಬರ್ 31ರ ಬಳಿಕ ಹಲವು ಬಾರಿ ಕೇಳಿದ್ರು ಬಾಕಿ ತೆರಿಗೆ ಹಣವನ್ನ ಪಾವತಿ ಮಾಡಿರಲಿಲ್ಲ. ನವೆಂಬರ್ 15ರಂದು ಮತ್ತೆ ಬೀಗ ಹಾಕೋದಕ್ಕೆ ಮುಂದಾಗಿತ್ತು. ಆದ್ರೆ, ಬಿಬಿಎಂಪಿ 15 ದಿನ ಕಾಲಾವಕಾಶ ನೀಡಿತ್ತು. ಇದೀಗ ಮೂರನೇ ಬಾರಿ ಗಡುವು ಮುಗಿದಿದ್ರೂ ಮಂತ್ರಿ ಮಾಲ್ ತೆರಿಗೆ ಕಟ್ಟಿಲ್ಲ. ಹೀಗಾಗಿ, ಮಂತ್ರಿ ಮಾಲ್‌ಗೆ ಬೀಗ ಹಾಕಲಾಗಿದೆ.










