4 ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಶುಗರ್ ಕಾರ್ಖಾನೆ ಪುನಾರಂಭ…

63
firstsuddi

ಮಂಡ್ಯ : ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತವಾಗಿದ್ದ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮಂಡ್ಯದ ಮೈ ಶುಗರ್ ಕಾರ್ಖಾನೆಗೆ ಇಂದು ಮರು ಚಾಲನೆ ನೀಡಲಾಯಿತು.

ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ ಕೆ.ಸಿ. ನಾರಾಯಣ ಗೌಡ ಕಾರ್ಖಾನೆಯ ಬಾಯ್ಲರ್ ಗಳಿಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಿದರು.

ಸಂಸದೆ ಸುಮಲತಾ ಮಾತನಾಡಿ, ನಾನು ಸಂಸದೆಯಾಗಿ 3 ವರ್ಷಗಳು ಕಳೆದಿವೆ. ಚುನಾವಣೆಯ ವೇಳೆಯಲ್ಲಿ ಮಂಡ್ಯದ ರೈತರಿಗೆ ಮೈಶುಗರ್ ಕಾರ್ಖಾನೆ ಚಾಲನೆ ಮಾಡೇ ಮಾಡಿಸುತ್ತೇನೆಂದು ವಾಗ್ದಾನ ಕೊಟ್ಟಿದ್ದೆ. ಅದು ಇಂದು ಈಡೇರಿದೆ. ನನಗೆ ಸರ್ಕಾರದಿಂದ ಸಾಕಷ್ಟು ಸಹಕಾರ ಸಿಕ್ಕಿದೆ. ಅಂಬರೀಶ್ ಅವರ ಕನಸು ಇದಾಗಿತ್ತು ಎಂದು ಹೇಳಿದರು.