ತುಮಕೂರು : 45 ವರ್ಷದ ವ್ಯಕ್ತಿ ಜೊತೆ 25 ವರ್ಷದ ಯುವತಿ ವಿವಾಹವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಇದೀಗ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ (45)ಎಂಬುವರ ಜೊತೆ ಮೇಘನಾ(25) ಎಂಬ ಯುವತಿ ಮದುವೆಯಾಗಿದ್ದಾಳೆ. ಮೇಘನಾ ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದು, ಈಕೆಗೆ ಬೇರೆಯವರ ಜೊತೆ ಮೊದಲೇ ಒಂದು ಮದುವೆ ಆಗಿದ್ದು, ವಿಚ್ಛೇದನ ಆಗಿತ್ತು.
ಇನ್ನೂ ಹೆಣ್ಣು ಸಿಗದೇ ಇದ್ದ ಶಂಕರಗೆ ಈವರೆಗೂ ಮದುವೆ ಆಗಿರಲಿಲ್ಲ. ಕನ್ಯೆ ಹುಡುಕಿ ಹುಡುಕಿ ಸುಸ್ತಾಗಿ ಮದುವೆಯೇ ಬೇಡ ಎಂದು ಶಂಕರ್ ನಿರ್ಧರಿಸಿದ್ದರು. ಈ ವೇಳೆ ಸ್ವತಃ ಮೇಘನಾ ಅವರು ಶಂಕರ ಅವರನ್ನು ಮದುವೆ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಒಪ್ಪಿಕೊಂಡ ಶಂಕರ ಅವರು ಸಮೀಪದ ದೇವಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಸದ್ಯ ಈ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.










