48 ವರ್ಷಗಳ ಹಿಂದಿನ ರೆಸ್ಯೂಮ್ ಹಂಚಿಕೊಂಡ ಬಿಲ್‌ಗೇಟ್ಸ್.

64
firstsuddi

ವಾಷಿಂಗ್ಟನ್ : ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಅವರು 48 ವರ್ಷಗಳ ಹಿಂದೆ ಸಿದ್ದಪಡಿಸಿದ್ದ ತಮ್ಮ ಮೊದಲ ರೆಸ್ಯೂಮ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.

ನೀವು ಇತ್ತೀಚೆಗೆ ಪದವಿ ಪಡೆದವರು ಆಗಿರಲಿ ಅಥವಾ ಕಾಲೇಜು ಡ್ರಾಪ್ ಔಟ್ ಆಗಿರಲಿ, ನಿಮ್ಮ ರೆಸ್ಯೂಮ್ ನನ್ನ 48 ವರ್ಷಗಳ ಹಿಂದಿನ ರೆಸ್ಯೂಮ್ ಗಿಂತ ಬಹಳ ಚೆನ್ನಾಗಿರುತ್ತೆ. ನಿಮ್ಮ ರೆಸ್ಯೂಮ್ ಬಹಳ ಉತ್ತಮವಾಗಿ ಕಾಣುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಬಿಲಿಯನೇರ್ ಬಿಲ್ ಗೇಟ್ಸ್ ಹೇಳಿದ್ದಾರೆ. ಬಿಲ್ ಗೇಟ್ಸ್ ಹಾರ್ವರ್ಡ್ ಕಾಲೇಜಿನಲ್ಲಿ ಮೊದಲ ವರ್ಷದಲ್ಲಿದ್ದಾಗ ಈ ರೆಸ್ಯೂಮ್ ಸಿದ್ಧಪಡಿಸಿಕೊಂಡಿದ್ದರು.

ಹಲವಾರು ಬಳಕೆದಾರರು ಬಿಲ್ ಗೇಟ್ಸ್ ಅವರ ರೆಸ್ಯೂಮ್ ಪರಿಪೂರ್ಣವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ನಾಸ್ಟಾಲ್ಜಿಕ್ ಕ್ಷಣವನ್ನು ಹಂಚಿಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಾವೆಲ್ಲರೂ ಜೀವನದ ಪಯಣದಲ್ಲಿ ಹಿಂದಿರುಗಿ ನೋಡಲು ನಮ್ಮ ಹಿಂದಿನ ರೆಸ್ಯೂಮ್ ಗಳ ನಕಲುಗಳನ್ನು ಇಟ್ಟುಕೊಳ್ಳಬೇಕು ಎಂದು ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.