500 ರೂ. ನೋಟಿನ ಹಾಸಿಗೆ ಮೇಲೆ ಮಲಗಿದ ಅಸ್ಸಾಂ ರಾಜಕಾರಣಿ…

45
firstsuddi

ನವದೆಹಲಿ: ಅಸ್ಸಾಂ ರಾಜಕಾರಣಿಯೊಬ್ಬರು ನೋಟುಗಳನ್ನೇ ಹಾಸಿಗೆ ಮಾಡಿಕೊಂಡು ಅದರ ಮೇಲೆ ಮಲಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಸ್ಸಾಂನ ಉಡಾಲ್ಗುರಿ ಜಿಲ್ಲೆಯ ಭೈರಾಗೂರಿಯಲ್ಲಿ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷನಾಗಿದ್ದ ಬೋಡೋಲ್ಯಾಂಡ್ ಪಕ್ಷದ ನಾಯಕ ಬೆಂಜಮಿನ್ ಬಸುಮಾತಾರಿ ಈ ರೀತಿ 500 ರೂ. ನೋಟಿನ ಮೇಲೆ ಮಲಗಿದ್ದಾನೆ. ಆತನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಈತ ಗ್ರಾಮದಲ್ಲಿ ಪ್ರಧಾನ ಮಂತ್ರಿಗಳ ವಸತಿ ಯೋಜನೆಯಲ್ಲಿ, ಭ್ರಷ್ಟಾಚಾರ ಮತ್ತು ನರೇಗಾ ಯೋಜನೆಯಲ್ಲಿ ಬಡ ಫಲಾನುಭವಿಗಳಿಂದ ಲಂಚ ಪಡೆದ ಆರೋಪ ಇದೆ.

ಫೋಟೋಗೆ ಸ್ಪಷ್ಟನೆ:
ಫೋಟೋ ನೋಡಿ ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಪಕ್ಷ ಸ್ಪಷ್ಟನೆ ನೀಡಿದೆ. ಪಿಪಿಎಲ್ ಮುಖ್ಯಸ್ಥ ಪ್ರಮೋದ್ ಬೋರೋ ಈ ವ್ಯಕ್ತಿಗೂ ಪಕ್ಷಕ್ಕೂ ಈಗ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಬೆಂಜಮಿನ್ ಬಾಸುಮತರಿ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 2024ರ ಜನವರಿ 10 ರಂದು ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅಷ್ಟೇ ಅಲ್ಲದೇ 2024ರ ಫೆಬ್ರವರಿ 10ರಂದು ವಿಸಿಡಿಸಿ ಅಧ್ಯಕ್ಷ ಸ್ಥಾನದಿಂದ ಅವರನ್ನು ತೆಗೆಯಲಾಗಿದೆ. ಅವರ ಕೃತ್ಯಗಳಿಗೆ ಅವರೇ ಹೊಣೆ ಎಂದು ಹೇಳಿದ್ದಾರೆ.