6ನೇ ಪತ್ನಿಗೆ 5,527 ಕೋಟಿ ರೂ. ಜೀವನಾಂಶ ನೀಡುವಂತೆ ದುಬೈ ದೊರೆಗೆ ಲಂಡನ್ ಹೈಕೋರ್ಟ್ ಆದೇಶ…

73
firstsuddi

ಲಂಡನ್ : ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ತಮ್ಮ ಆರನೇ ಪತ್ನಿಗೆ ಜೀವನಾಂಶವಾಗಿ ಬರೋಬ್ಬರಿ 5,527 ಕೋಟಿ ರೂಪಾಯಿ ನೀಡುವಂತೆ ಲಂಡನ್ ಹೈಕೋರ್ಟ್ ಆದೇಶ ನೀಡಿದ್ದು, ಇದರಲ್ಲಿ 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾಗೆ ಪಾವತಿಸಬೇಕು ಎಂದು ಹೇಳಿದೆ.

ರಶೀದ್ ಅವರ ಪತ್ನಿಯರ ಪೈಕಿ ಹಯಾ ಕಿರಿಯವರಾಗಿದ್ದು, ದಂಪತಿಗೆ ಅಲ್ ಜಲಿಲಿಯಾ(14), ಜಯದ್ (9) ಎಂಬ ಇಬ್ಬರು ಮಕ್ಕಳಿದ್ದಾರೆ. ಈ ಮಕ್ಕಳ ಶಿಕ್ಷಣಕ್ಕಾಗಿ 96 ಕೋಟಿ ರೂ.ನೀಡಬೇಕು. ಅವರು ಅಪ್ರಾಪ್ತರಾಗಿರುವುದರಿಂದ ಜವಾಬ್ದಾರಿ ನಿಭಾಯಿಸಲು 112 ಕೋಟಿ ರೂ. ವಾರ್ಷಿಕವಾಗಿ ನೀಡಬೇಕಿದೆ ಎಂದು ಕೋರ್ಟ್ ಹೇಳಿದೆ.

ಇತರೆ ಅಗತ್ಯತೆಗಳಿಗೆ 2,907 ಕೋಟಿ ರೂ.ಗಳನ್ನು ಬ್ಯಾಂಕ್ ಗ್ಯಾರಂಟಿಯಾಗಿ ನೀಡಬೇಕಾಗುತ್ತದೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಸದ್ಯ ಬ್ರಿಟನ್ ಇತಿಹಾಸದಲ್ಲೇ ಇದು ಅತ್ಯಂತ ದುಬಾರಿ ವಿಚ್ಛೇದನವಾಗಿದೆ ಎಂದು ಹೇಳಲಾಗಿದೆ.

ತನ್ನ ಬಾಡಿಗಾರ್ಡ್‍ನೊಂದಿಗೇ ಸಂಬಂಧ ಹೊಂದಿದ್ದ ರಾಜಕುಮಾರಿ ಹಯಾಜೀ ಜೀವಭಯದ ಕಾರಣ 2019ರಲ್ಲಿ ಹಯಾ ಅವರು ಪತಿಯನ್ನು ತೊರೆದು ಬ್ರಿಟನ್ಗೆ ತೆರಳಿದ್ದರು. ಒಂದು ತಿಂಗಳ ಬಳಿಕ ಶೇಖ್ ಮಹಮ್ಮದ್ ಅವರಿಗೆ ವಿಚ್ಛೇದನ ನೀಡಿದ್ದ ಹಯಾ ತನ್ನ ಪತಿಯಿಂದ ಭಯಭೀತರಾಗಿರುವುದಾಗಿ ಆರೋಪಿಸಿದ್ದರು.

72 ವರ್ಷದ ಶೇಖ್ ಮೊಹಮ್ಮದ್, ಯುನೈಟೆಡ್ ಅರಬ್ ಎಮಿರೇಟ್ಸ್ನ ಉಪಾಧ್ಯಕ್ಷ ಮತ್ತು ಮಂತ್ರಿಯಾಗಿದ್ದು, ಪ್ರಮುಖ ಕುದುರೆ ತಳಿಗಾರ. ರಾಣಿ ಎಲಿಜಬೆತ್ ರೊಂದಿಗೂ ಶೇಖ್ ಮೊಹಮ್ಮದ್ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.