ಜಾರ್ಖಂಡ್- ಒಂದೇ ಕುಟುಂಬದ ಆರು ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್ ನ ಹಝಾರಿಬಾಗ್ ನ ಮನೆಯೊಂದರಲ್ಲಿ ನಿನ್ನೆ ಕಂಡುಬಂದಿದ್ದು, ಐವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು , ಉಳಿದ ಆರನೇ ವ್ಯಕ್ತಿ ಮನೆಯ ಛಾವಣಿಯ ಮೇಲೆ ಹಾರಿ ಸಾವನ್ನಪ್ಪಿದ್ದು, ಮಹಾವೀರ್ ಮಹೇಶ್ವರಿ(70), ಅವರ ಪತ್ನಿ ಕಿರಣ್ ಮಹೇಶ್ವರಿ(65), ಮಗ ನರೇಶ್ ಅಗರ್ವಾಲ್(40), ಅವರ ಪತ್ನಿ ಪ್ರೀತಿ ಅಗರ್ವಾಲ್(38), ಮಕ್ಕಳಾದ ಅಮನ್(8) ಮತ್ತು ಅಂಜಲಿ (6) ಸಾವಿಗೆ ಶರಣಾಗಿದ್ದು ಈ ಕುಟುಂಬವು ಸಾಲದ ಹೊರೆಯಿಂದ ಬೆಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು ಪೊಲೀಸರಿಗೆ ಆತ್ಮಹತ್ಯೆಯ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು ಇನ್ನು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.