ಭಾರೀ ಗಾಳಿ ಮಳೆ ನಡುವೆಯೂ ಸೈಕಲ್ ರ್ಯಾಲಿ ಯಲ್ಲಿ ಭಾಗವಹಿಸಿದ ಎಸ್.ಪಿ ಅಣ್ಣಾಮಲೈ…

668
firstsuddi

ಚಿಕ್ಕಮಗಳೂರು: ಭಾರೀ ಗಾಳಿಯೊಂದಿಗೆ ಮಲೆನಾಡಲ್ಲಿ ಧಾರಾಕಾರ ಮಳೆಯಾಗ್ತಿದೆ. ಆದ್ರೆ, ಈ ಮಳೆಯಲ್ಲೇ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಸೈಕ್ಲಿಂಗ್ ಮಾಡಿದ್ದಾರೆ. ಮಂಗಳೂರು ಮತ್ತು ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ನಿಂದ ಆಯೋಜನೆಗೊಂಡು ನಿನ್ನೆ ನಡೆದ ಮೂರನೇ ವರ್ಷದ ಮಾನ್ಸೂನ್ ಬ್ರಿವೇ ಸೈಕ್ಲಿಂಗ್‍ ನಲ್ಲಿ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಎರಡನೇ ವರ್ಷವೂ ಭಾಗವಹಿಸಿದ್ದು.

firstsuddi

ಬೆಳಗ್ಗೆ ಆರು ಗಂಟೆಗೆ ನಗರದ ಟೌನ್ ಕ್ಯಾಂಟೀನ್‍ ನಿಂದ ಆರಂಭವಾದ ಸೈಕಲ್ ರ್ಯಾಲಿಯಲ್ಲಿ 20 ಕ್ಕೂ ಹೆಚ್ಚು ಜನ ಭಾಗವಹಿಸಿದ್ರು. ಬಾಳೆಹೊನ್ನೂರು, ಎನ್.ಆರ್.ಪುರ, ಕೊಪ್ಪ, ತೀರ್ಥಹಳ್ಳಿ, ಮಂಡಗದ್ದೆ ಮಾರ್ಗವಾಗಿ ಸಕ್ರೆಬೈಲಿನ ಮೂಲಕ ಒಟ್ಟು 300 ಕಿ.ಮೀ. ಕ್ರಮಿಸಿ ಅದೇ ಮಾರ್ಗವಾಗಿ ಚಿಕ್ಕಮಗಳೂರಿಗೆ ಹಿಂದಿರುಗಿದ್ದಾರೆ. ಆದ್ರೆ, ಸುರಿಯೋ ಧಾರಾಕಾರ ಮಳೆ ಭಾರೀ ಗಾಳಿಯ ನಡುವೆಯೇ ಎಸ್ಪಿ ಸೈಕ್ಲಿಂಗ್ ಮಾಡಿರೋದನ್ನು ಕಂಡು ಸ್ಥಳಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಮಾರ್ಗ ಮಧ್ಯೆ ಊಟ-ತಿಂಡಿ-ಕಾಫಿಗೆ ಸೈಕಲ್ ನಿಲ್ಲಿಸಿದಾದ ಅವರೊಂದಿಗೆ ಸೆಲ್ಫಿ ಹೊಡೆದುಕೊಂಡು ಖುಷಿ ಪಟ್ಟಿದ್ದಾರೆ.