60ರ ವೃದ್ಧೆ ಮೇಲೆ ಅತ್ಯಾಚಾರ – ಇಬ್ಬರು ಕಾಮುಕರ ಬಂಧನ…

82
firstsuddi

ವಿಜಯಪುರ : 60 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಕಾಮುಕರನ್ನ ಬಂಧಿಸಲಾಗಿದೆ.

ವೃದ್ಧೆ ಜೋರಾಪುರ ಪೇಟೆಯ ದೇವಸ್ಥಾನದಲ್ಲಿ ಭಕ್ತರು ನೀಡುವ ಭಿಕ್ಷೆಯಿಂದ ಜೀವನ ಸಾಗಿಸುತ್ತಿದ್ದರು. ಮಾ.2 ರಂದು ವೃದ್ಧೆ ತನ್ನ ಮನೆಗೆ ಡ್ರಾಪ್ ಮಾಡಲು ಸಹಾಯವನ್ನು ಕೋರಿದಾಗ, ಕೂಡಲೇ ಇಬ್ಬರು ಕಾಮುಕರು ಹೋಗುತ್ತೇವೆ ಎಂದು ಹೇಳಿ ವೃದ್ಧೆಯನ್ನು ಅಟೋದಲ್ಲಿ ಹತ್ತಿಸಿಕೊಂಡಿದ್ದಾರೆ. ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಬಳಿಕ ವೃದ್ಧೆಯನ್ನು ಅಲ್ಲಿಯೇ ಬಿಟ್ಟು ಕಾಮುಕರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಇತ್ತ ವೃದ್ಧೆ ನಿಸ್ಸಾಯಕ ಸ್ಥಿತಿಯಲ್ಲಿ ಕಷ್ಟ ಪಟ್ಟು ವಿಜಯಪುರದ ಜಮಖಂಡಿ ರಸ್ತೆಗೆ ಬಂದಿದ್ದಾಳೆ. ಈಕೆಯ ಸ್ಥಿತಿ ಕಂಡು ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವೃದ್ಧೆಯನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಳಿಕ ತನ್ನ ಮೇಲೆ ಅತ್ಯಾಚಾರ ಆಗಿದ್ದರ ಕುರಿತು ನಗರದ ಮಹಿಳಾ ಪೊಲೀಸ್ ಠಾಣೆಯ ಆಧಿಕಾರಿಗಳ ಬಳಿ ಹೇಳಿಕೊಂಡಿದ್ದರು.

ಇದೀಗ ವೃದ್ಧೆಯ ಮಾಹಿತಿ ಹಾಗೂ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ತನಿಖೆ ಕೈಗೊಂಡ ಮಹಿಳಾ ಠಾಣೆ ಪೊಲೀಸರು ಇಬ್ಬರು ಆರೋಪಿಗಳಾದ ಸದ್ದಾಶೇಖ್ ಹಾಗೂ ರವಿಯನ್ನು ಬಂಧಿಸಿದ್ದಾರೆ. ಇಬ್ಬರೂ ಕಾಮುಕರು ಕೂಲಿ ಕೆಲಸ, ಸ್ಕ್ರಾಪ್ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.