ನವದೆಹಲಿ : ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. 8 ಪ್ರಯಾಣಿಕರನ್ನು ಸಾಗಿಸುವ ವಾಹನದಲ್ಲಿ ಕನಿಷ್ಠ 6 ಏರ್ ಬ್ಯಾಗ್ ಕಡ್ಡಾಯಗೊಳಿಸುವ ಕರಡು ಜಿಎಸ್ ಆರ್ ಅಧಿಸೂಚನೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಚಿವರು, 8 ಪ್ರಯಾಣಿಕರನ್ನು ಸಾಗಿಸುವ ಮೋಟಾರು ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಈಗ ಕನಿಷ್ಠ 6 ಏರ್ ಬ್ಯಾಗ್ ಗಳನ್ನು ಕಡ್ಡಾಯಗೊಳಿಸುವ ಕರಡು ನಿಯಮನ್ನು ನಾನು ಅನುಮೋದಿಸಿದ್ದೇನೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಹೊಸ ನಿಯಮದ ಪ್ರಕಾರ, ಇದೀಗ ಯಾವುದೇ ಮಾಡೆಲ್ ಗಳ ಕಾರುಗಳಲ್ಲಿ ಆರು ಏರ್ ಬ್ಯಾಗ್ ಅಳವಡಿಸಲೇಬೇಕಿದೆ. ಏರ್ ಬ್ಯಾಗ್ ಕಡ್ಡಾಯಗೊಳಿಸಿದ್ದರಿಂದ ವಾಹನಗಳ ಬೆಲೆ 8-10 ಸಾವಿರ ರೂ. ಏರಿಕೆಯಾಗುವ ಸಾಧ್ಯತೆಯಿದೆ.










