ಗೋವಾ ಶಾಸಕರ ಬಿಎಂಡಬ್ಬ್ಯೂ ಕಾರು ಹರಿದು ಬೆಳಗಾವಿ ಯುವತಿ ಸಾವು…

231
firstsuddi

ಬೆಳಗಾವಿ:ಗೋವಾ ಶಾಸಕ ಗ್ಲೆನ್ ಟಿಕ್ಲೊ ಅವರ ಪುತ್ರ ಕೈಲ್ ಟಿಕ್ಲೋ ಚಲಾಯಿಸುತ್ತಿದ್ದ ಬಿಎಂಡಬ್ಬ್ಯೂ ಕಾರು ರಾಷ್ಟ್ರೀಯ ಹೆದ್ದಾರಿ 4ರ ಸಮೀಪ ರಸ್ತೆ ದಾಟುತಿದ್ದ ಯುವತಿಯರಿಗೆ ಡಿಕ್ಕಿ ಹೊಡೆದ  ಪರಿಣಾಮ ಒರ್ವ ಯುವತಿ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗಾಂಧಿನಗರದಲ್ಲಿ ನಡೆದಿದ್ದು, ತಾಹಿನಿಯತ್ ಬಿಸ್ಟಿ (20) ಎಂಬ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಸಮ್ರಿನ್ ಎಂಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದು,ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವಾದ ಕೂಡಲೇ ಸಿಟ್ಟಿಗೆದ್ದ ಸ್ಥಳೀಯರು ಕೈಲ್ ಟಿಕ್ಲೋ ಅವರ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಉತ್ತರ ಸಂಚಾರಿ ಠಾಣೆಯಲ್ಲಿ ಕೈಲ್ ಟಿಕ್ಲೋ ವಿರುದ್ಧ ಪ್ರಕರಣ ದಾಖಲಾಗಿದೆ.