ಬೀರೂರು: ಟಿವಿಎಸ್ ಎಕ್ಸೆಲ್ ಬೈಕ್ ಗಾಗಿ ಎರಡು ಮಕ್ಕಳ ತಂದೆಯನ್ನು ಹತ್ಯೆ ಮಾಡಿದ ಪಿಯುಸಿ ವಿದ್ಯಾರ್ಥಿ…

938

ಚಿಕ್ಕಮಗಳೂರು: ರಸ್ತೆ ಬದಿಯಲ್ಲಿ ಮೋಹನ್ (39) ಎಂಬಾತನ ಬರ್ಬರ ಹತ್ಯೆ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಬೀರೂರು ಪೊಲೀಸರು ಯಶಸ್ವಿಯಾಗಿದ್ದು, ಶಿವರಾಜ್ (19) ಬಂಧಿತ ಆರೋಪಿ. ಪಿಯುಸಿ ಓದುತ್ತಿದ್ದು, ಪೇಪರ್ ಹಾಕುವ ಕೆಲಸ ಮಾಡುತ್ತಿದ್ದು, ಪೇಪರ್ ಹಾಕೋಕೆ ಹೋಗುವಾಗ ಎದುರಿಗೆ ಬಂದ ಬೈಕ್ ಗೆ ಕೈ ಅಡ್ಡ ತೋರಿಸಿ ಅಣ್ಣಾ… ಅಲ್ಲಿ ತನಕ ಡ್ರಾಪ್ ಪ್ಲೀಸ್ ಅಂದ. ಪಾಪ ಹುಡುಗ ಅಂತ ಆತ ಬೈಕ್ ಗೆ ಹತ್ತಿಸಿಕೊಂಡು ಬೈಕ್ ಓಡಿಸುತ್ತಿದ್ದಾಗ ಮಾರ್ಗ ಮಧ್ಯೆ ಮೋಹನ್ಗೆ ಫೋನ್ ಬಂದಿದ್ದು, ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಚಿಗುರುಮೀಸೆ ಹುಡುಗ ಅಲ್ಲೆ ಬಿದ್ದಿದ್ದ ದೊಣ್ಣೆಯಲ್ಲಿ ಹೊಡೆದು ಮೋಹನ್ ನನ್ನು ಕೊಂದಿದ್ದಾನೆ. ಅಸಲಿಗೆ ಇಬ್ಬರಿಗೂ ಸಂಬಂಧವೇ ಇಲ್ಲ. ಆದರೂ, ಕೊಲೆ ಮಾಡಿದ್ದಾನೆ ಅಂದ್ರೆ, ಕಾರಣ ಮಾತ್ರ ವಿಚಿತ್ರ.
ಆಧುನಿಕ ಜಗತ್ತು ಹಾಗೂ ಯುವಜನತೆ ಎಷ್ಟು ಕೆಟ್ಟಿದ್ದಾರೆ ಅಂದ್ರೆ ಮೈಬಗ್ಗಿಸಿ ದುಡಿಯೋಲ್ಲ ಆದ್ರೆ, ಬಯಸಿದ್ದೆಲ್ಲಾ ಬೇಕು. ಅದಕ್ಕಾಗಿ ಕೊಲೆ ಬೇಕಾದರೂ ಮಾಡ್ತಾರೆ. ಯಾಕಂದ್ರೆ, ಅಂದು ಅಕ್ಟೋಬರ್ 5. ಬೆಳಗ್ಗಿನ ಜಾವ 6.30. ಜಿಲ್ಲೆಯ ಕಡೂರು ತಾಲೂಕು ಬೀರೂರಿನ ಮೋಹನ್ ಪೂಜೆಗೆಂದು ಬೇವಿನ ಸೊಪ್ಪು ತರಲು ಹೋಗುತ್ತಿದ್ದು, ತರೀಕೆರೆಯಿಂದ ಬೆಳಗ್ಗಿನ ಜಾವ 4ಕ್ಕೆ ಬಂದು ಕಾದು ಕೂತಿದ್ದ 19 ವರ್ಷದ ಶಿವರಾಜ್, ಟಿವಿಎಸ್ ಎಕ್ಸೆಲ್ ಬೈಕ್ ಕಂಡೊಡನೆ, ಅಣ್ಣಾ ಪಕ್ಕದ ತೋಟಕ್ಕೆ ಕೆಲಸ ಹೋಗ್ತಿದ್ದೇನೆ, ಅಲ್ಲಿಯವರೆಗೂ ಬಿಡಿ ಎಂದು ಬೈಕ್ ಹತ್ತಿದ್ದಾನೆ ಮಾರ್ಗ ಮಧ್ಯೆ ಮೋಹನ್ ಗೆ ಫೋನ್ ಬಂದಿದ್ದು, ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಶಿವರಾಜ್ ಪಕ್ಕದಲ್ಲೇ ಬಿದ್ದಿದ್ದ ದೊಣ್ಣೆಯಿಂದ ಮೋಹನ್ ಗೆ ಹೊಡೆದು ಸಾಯಿಸಿ ಟಿವಿಎಸ್ ಎಕ್ಸೆಲ್ ಬೈಕ್ ಹಾಗೂ ಮೊಬೈಲ್ ನೊಂದಿಗೆ ಪರಾರಿಯಾಗಿದ್ದಾನೆ.
ಶಿವರಾಜ್ ಗೆ ಟಿವಿಎಸ್ ಎಕ್ಸೆಲ್ ಬೈಕ್ ಅಂದರೆ ಭಾರೀ ಪ್ರೀತಿ. ಅದಕ್ಕಾಗಿ ಕೊಲೆ ಮಾಡಿ ಬೈಕ್ ಹೊತ್ತೊಯ್ದಿದ್ದ. ಆದರೆ ಇಂದು ಪೊಲೀಸರ ಅತಿಥಿಯಾಗಿ ಕಂಬಿ ಎಣಿಸ್ತಿದ್ದಾನೆ. ಶಿವರಾಜ್, ಮೃತದೇಹವನ್ನು ಗಿಡಘಂಟೆಯೊಳಗೆ ಎಳೆದೊಯ್ತಿರೋ ಸಿಸಿಟಿವಿ ಫುಟೇಜ್ ಕೂಡ ಪೊಲೀಸರಿಗೆ ಸಿಕ್ಕಿದ್ದು, ಒಟ್ಟಾರೆ, ಚಿಗುರುಮೀಸೆ ಯುವಕನ ಟಿವಿಎಸ್ ಎಸ್ ಎಲ್ ಹೆವಿ ಡ್ಯೂಟಿ ಶೋಕಿಗೆ ಬಲಿಯಾಗಿದ್ದು ಮಾತ್ರ ಎರಡು ಮಕ್ಕಳ ಅಮಾಯಕ ತಂದೆ. ಕೆಲಸ ಮಾಡಿಕೊಂಡು ಪಿಯುಸಿ ಓದುತ್ತಿದ್ದ ಯುವಕ ಶೋಕಿಗಾಗಿ ಹತ್ಯೆ ಮಾಡಿದ್ದನಂದ್ರೆ ಆಧುನಿಕ ಜಗತ್ತು ಬದುಕನ್ನ ಏನೆಂದುಕೊಂಡಿದೆ ಎಂದು ಯೋಚಿಸಬೇಕಾಗಿದೆ. ಜೊತೆಗೆ, 19 ವರ್ಷದ ಯುವಕ ಬೈಕ್ ಗಾಗಿ ಕೊಲೆ ಮಾಡುವ ಮಟ್ಟಕ್ಕೆ ಇಳಿದಿದ್ದು ಪೊಲೀಸರಿಗೆ ಹಾಗೂ ನಾಗರೀಕರಲ್ಲಿ ಅಚ್ಚರಿ ತಂದಿದೆ.