ಮೂಡಿಗೆರೆ: ಕಳಸ ಜೆಸಿಐ ಘಟಕಕ್ಕೆ 2018ರ ದಿ ಬೆಸ್ಟ್ ಪ್ರೆಸಿಡೆಂಡ್ ಅವಾರ್ಡ್ ಜೊತೆ ಒಂಬತ್ತು ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಕಳಸ ಜೆಸಿಐ ಅಧ್ಯಕ್ಷ ಸಿ.ಚಂದ್ರಪ್ಪ ತಿಳಿಸಿದ್ದಾರೆ.ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಜೆಸಿಐ ವಲಯದ ವಾರ್ಷಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿಗಳನ್ನು ವಿತರಿಸಲಾಗಿದೆ.ಕೊಡಗು ನೆರೆ ಸಂತ್ರಸ್ತರಿಗೆ ನೆರವು,ಇಂಪ್ಯಾಕ್ಟ್ 20/30,ಮಂತ್‍ಲೀ ಸ್ಟಾರ್ ಪ್ರೆಸಿಡೆಂಟ್ ಅವಾರ್ಡ್,ಸ್ಟಾರ್ ಲಾಮ್ ಆಪ್ ದಿ ಮಂತ್,ಪಬ್ಲಿಕ್ ಕಮ್ಯೂನಿಟಿ ಪ್ರೋಗ್ರಾಂ,ಪಬ್ಲಿಕ್ ರಿಲೇಷನ್ ಪ್ರೋಗ್ರಾಂ,ಸಿಎಪಿಪಿ ಪ್ರೋಗಾಂ ಸೇರಿದಂತೆ ಹತ್ತು ಪ್ರಶಸ್ತಿಗಳನ್ನು ಕಳಸ ಜೆಸಿಐ ಪಡೆದುಕೊಂಡಿದೆ.ಅಲ್ಲದೆ 2018ರಲ್ಲಿ ವಲಯಮಟ್ಟದಲ್ಲಿ ನಡೆಸಿದ ಎನ್‍ಎಲ್‍ಟಿಎಸ್ ಪರೀಕ್ಷೆಯಲ್ಲಿ ಕಳಸದ ಜೆಇಎಂ ಆಂಗ್ಲ ಮಾದ್ಯಮ ಶಾಲೆಯ ಸುಹಾಸ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಪ್ರಶಸ್ತಿಗಳನ್ನು ವಲಯ ಅಧ್ಯಕ್ಷರಾದ ವಿಕಾಸ್ ಗೂಗ್ಲಿಯಾ ವಿತರಿಸಿದರು.ಈ ಸಂದರ್ಭದಲ್ಲಿ ಕಳಸ ಘಟಕದ ಪೂರ್ವಧ್ಯಕ್ಷರಾದ ಜಗದೀಶ್ ನಾಯ್ಕ್,ಸುದೀಶ್ ಸುವರ್ಣ,ಸುರೇಂದ್ರ,ಶಿವರಾಮ್ ಪಂಡಿತ್,ಮಹೇಶ್ ಬಿ.ಕೆ,ಸದಸ್ಯರಾದ ಅಶೋಕ್,ಅರುಣ್ ಕುಮಾರ್ ಇತರರು ಇದ್ದರು.










