ಗಾಯಕ ರಘು ದೀಕ್ಷಿತ್ ಮೇಲೆ ಲೈಂಗಿಕ ಕಿರುಕುಳ ಆರೋಪಕ್ಕೆ ಪತ್ನಿ ಮಯೂರಿ ಹೇಳಿದ್ದೇನು..?

1793
firstsuddi

ಬೆಂಗಳೂರು:ಸಂಗೀತಗಾರ ರಘು ದೀಕ್ಷಿತ್ ವಿರುದ್ಧ ಗಾಯಕಿ ಚಿನ್ಮಯಿ ಶ್ರೀಪಾದ್ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ರಘು ದೀಕ್ಷಿತ್ ಪತ್ನಿ ಮಯೂರಿ ಉಪಾಧ್ಯ ಟ್ವೀಟ್ ಮಾಡಿದ್ದು, ನಮ್ಮ ಮದುವೆ ಮತ್ತು ವಿಚ್ಚೇದನದ ಇಲ್ಲಿ ಮುಖ್ಯವಲ್ಲ. ನಾನು ಮೊದಲು ಹೆಣ್ಣು, ನಂತರ ಹೆಂಡತಿ. ಒಬ್ಬ ಸೆಲಿಬ್ರಿಟಿಯಾಗಲಿ, ಸಾಮಾನ್ಯ ವ್ಯಕ್ತಿಗಳಾಗಿರಲಿ, ಪ್ರತಿಯೊಬ್ಬ ಪ್ರಜೆಗೂ ಘನತೆ, ಗೌರವ ಮುಖ್ಯವಾಗುತ್ತದೆ. ಇಂತಹ ವಿಷಯಗಳ ಬಗ್ಗೆ ಮಾತಾಡಲು ತುಂಬ ಧೈರ್ಯ ಬೇಕು.ಚಿನ್ಮಯಿ ಶ್ರೀಪಾದ್ ಅವರ ಆ ಧೈರ್ಯ ಮೆಚ್ಚುವಂತದ್ದು. ಘಟನೆಗಳಲ್ಲಿ ಸತ್ಯವೇನು ಎಂಬುದು ನನಗೆ ಗೊತ್ತಿಲ್ಲ. ಸಂತ್ರಸ್ಥತೆಯರಿಗೆ ನನ್ನ ಬೆಂಬಲವಿದೆ ಎಂದಿದ್ದಾರೆ.