ಮೂಡಿಗೆರೆ: ಸ್ಚಚ್ಚತೆ ಆರೋಗ್ಯ ಪೂರ್ಣ ಸಮಾಜದ ಅಡಿಪಾಯವಾಗಿದ್ದು ಸ್ವಚ್ಚತೆ ಪ್ರತಿಮನೆಯ ಮೊದಲ ಆದ್ಯತೆಯಾಗಲಿ ಎಂದು ಸುಂಕಸಾಲೆ ಗ್ರಾ.ಪಂ ಪಿಡಿಓ ಪದ್ಮರಾಜ್ ಹೇಳಿದರು.ಸುಂಕಸಾಲೆ ಗ್ರಾ.ಪಂ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮಂಗಳವಾರ ನಡೆದ ಸ್ವಚ್ಛತಾ ಮಾಸಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಕುಗ್ರಾಮದಿಂದ ಹಿಡಿದು ನಗರ ಪ್ರದೇಶದವರೆಗೂ ಸ್ವಚ್ಚತೆ ಮೂಲತಂತ್ರವಾಗಬೇಕು. ಗ್ರಾಮಗಳು ಸ್ವಚ್ಚತೆ ಕಂಡರೆ ದೇಶವೇ ಸ್ವಚ್ಚತೆಯಾದಂತೆ ಇದಕ್ಕೆ ಸಾರ್ವಜನಿಕರ ಮತ್ತು ಗ್ರಾಮಸ್ಥರ ಸಹಕಾರ ಅವಶ್ಯಕವಾಗಿದೆ. ಸಾಮಾಜಿಕ ಕಳಕಳಿಯ ಸಂಘ ಸಂಸ್ಥೆಗಳು ಗ್ರಾಂ.ಪಂ.ಜೊತೆ ಕೈಜೋಡಿಸಿ ಪ್ರಧಾನಿ ಕಂಡ ನವ ಭಾರತ ನಿರ್ಮಾಣದ ಕನಸ್ಸು ನನಸಾಗಿಸಬಹುದು. ಸುಂಕಸಾಲೆ ಗ್ರಾಮ ವ್ಯಾಪ್ತಿಯಲ್ಲಿ ಬಲ್ಲಾಳರಾಯನ ದುರ್ಗದ ಕೋಟೆ ಇದ್ದು ಪ್ರವಾಸಿ ತಾಣವಾಗಿದೆ. ಪ್ರವಾಸಿಗರು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ ಎಂದರು.
ಗ್ರಾ.ಪಂ ಅಧ್ಯಕ್ಷ ಪ್ರೇಮ್ ದಿವಾಕರ್ ಮಾತನಾಡಿ ಸ್ವಚ್ಚತೆಗೆ ಗ್ರಾ.ಪಂ ಜೊತೆಗೆ ಸಂಘ ಸಂಸ್ಥೆಗಳು ಕೈಜೋಡಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಗ್ರಾಮಸ್ಥರ ಹಾಗೂ ಸಂಘಸಂಸ್ಥೆಗಳ ಸಹಕಾರವಿದ್ದರೆ ಊರನ್ನು ಸ್ವಚ್ಚತೆ ಮಾಡಿ ದೇಶದಲ್ಲಿ ಮಾದರಿ ಗ್ರಾಮ ಮಾಡಬಹುದು. ಮನೆಯಿಂದ ಸ್ವಚ್ಛತೆಯ ಅರಿವು ಮೂಡಿಸುವ ಅಗತ್ಯವಿದ್ದು ಮನೆಯಿಂದ ಗ್ರಾಮ ಮತ್ತು ದೇಶವು ಸ್ವಚ್ಛಗೊಳುತ್ತದೆ ಎಂದರು.
ನೇರಂಕಿಯಿಂದ ಸುಂಕಸಾಲೆ ಮತ್ತು ಸುಂಕಸಾಲೆಯಿಂದ ಬಲ್ಲಾಳರಾಯನ ದುರ್ಗದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಗ್ರಾ.ಪಂ ಮಾಜಿ ಅಧ್ಯಕ್ಷ ಡಿ.ವೈ. ಮಹೇಶ್, ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರಾದ ಗುರುದೇವ್, ಪ್ರಸನ್ನ, ಸಂಜಯ್, ಕವಿಗೌಡ, ಶಿಕ್ಷಕ ಕಾಂತರಾಜ್, ಗ್ರಾಮದ ಮುಖಂಡರಾದ ರಾಮದಾಸಗೌಡ, ಕಿಸನ್ ಬಿಳಗಲಿ ಸುಧಾಕರ್ ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿಗಳು ಆಟೋ ಸಂಘದ ಪಧಾಧಿಕಾರಿಗಳು ಗ್ರಾಮಸ್ಥರು ಇದ್ದರು.










