ತರೀಕೆರೆ :ಆಯುಧ ಪೂಜೆಗೆ ಬೈಕ್ ತೊಳೆಯಲು ಕೆರೆಗೆ ಹೋಗಿದ್ದ ಮೂವರು ಯುವಕರ ದುರ್ಮರಣ…

561
firstsuddi

ಚಿಕ್ಕಮಗಳೂರು : ಕೆರೆಯಲ್ಲಿ ಮುಳುಗಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರದಲ್ಲಿ ಗ್ರಾಮದ ಕೆರೆಯಲ್ಲಿ ನಡೆದಿದ್ದು, ಹೇಮಂತ್ (18), ವಿಜಯ್ (21), ಶಿವರಾಜ್ (14) ಮೃತ ಯುವಕರು ಆಯುಧ ಪೂಜೆಗೆ ಬೈಕ್ ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಓರ್ವ ಯುವಕ ಕೆರೆಯಲ್ಲಿ ಬಿದ್ದಾಗ ಇನ್ನಿಬ್ಬರು ಯುವಕರು ಬಿದ್ದ ಯುವಕನನ್ನು ಎಳೆಯಲು ಹೋಗಿ ಅವರು ಕೆರೆಗೆ ಬಿದ್ದಿದ್ದು, ಮೂವರೂ ಯುವಕರಿಗೂ ಈಜು ಬರದೇ ಕೆರೆಯಲ್ಲೇ ಮುಳುಗಿ ಮೃತಪಟ್ಟಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.