ಮೂಡಿಗೆರೆ: ಮೂವರು ಜಿಂಕೆ ಬೇಟೆಗಾರರನ್ನು ಬಂಧಿಸಿರುವ ಘಟನೆ ತಾಲೂಕಿನ ಜನ್ನಾಪುರ ಸಮೀಪದ ಕನ್ನವಳಿ ಕಾಫಿ ತೋಟದಲ್ಲಿ ನಡೆದಿದ್ದು, ಹೇಮಶೇಖರ್ ಎಂಬುವರ ಕಾಫಿ ತೋಟದಲ್ಲಿ ಜಿಂಕೆ ಮಾಂಸ,ಚರ್ಮದೊಂದಿಗೆ ಮಣಿ, ಸುಂದರ್, ಗಜೇಂದ್ರ, ಎಂಬುವರು ಸಿಕ್ಕಿಬಿದ್ದಿದ್ದು, ಮೂಡಿಗೆರೆ ಆರ್ ಎಫ್ ಓ ಪ್ರಹ್ಲಾದ್ ನೇತೃತ್ವದಲ್ಲಿ ದಾಳಿ ನಡೆಸಿ 8 ಕೆ.ಜಿ ಜಿಂಕೆ ಮಾಂಸ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.










