ಜಂಬೂ ಸವಾರಿಗೆ ಯಾವುದೇ ಅಡಚಣೆಯಿಲ್ಲ- ಮುಖ್ಯಮಂತ್ರಿ ಕುಮಾರಸ್ವಾಮಿ…

496
firstsuddi

ಮೈಸೂರು: ರಾಜ ವಂಶಸ್ಥೆ ಪ್ರಮೋದಾದೇವಿ ತಾಯಿ ಪುಟ್ಟಚಿನ್ನಮ್ಮಣಿ ನಿಧನ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸೂತಕದ ಛಾಯೆ ಇದ್ದು, ರಾಜವಂಶಸ್ಥರು ಸರ್ಕಾರಕ್ಕೆ ಚಿನ್ನದ ಅಂಬಾರಿ ನೀಡಲಾಗುವುದಿಲ್ಲ ಎಂಬ ಊಹಾಪೋಹಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು  ರಾಜಮಾತೆಯ ನಿಧನದ ಬಳಿಕ ತಾವು ರಾಜವಂಶಸ್ಥರೊಂದಿಗೆ ಮಾತನಾಡಿದ್ದು, ಜಂಬೂ ಸವಾರಿಗೆ ಅರಮನೆಯಿಂದ ಬೇಕಾದ ಎಲ್ಲ ನೆರವನ್ನೂ ನೀಡುವುದಾಗಿ ಹೇಳಿದ್ದು, ಅರಸು ಮನೆತನದವರು ದಸರಾಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ.ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು  ತಿಳಿಸಿದ್ದಾರೆ.