ಬೆಂಗಳೂರು: ಸುದೀಪ್ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ನಾಯಕಿ ಅಮಲಾ ಪೌಲ್ ಅವರು ತಮಿಳುನಾಡಿನ ನಿರ್ದೇಶಕ ಸುಶಿ ಗಣೇಶನ್ ವಿರುದ್ಧ ಮೀ ಟೂ ಆರೋಪ ಮಾಡಿದ್ದಾರೆ. ನಾನು ನಾಯಕಿಯಾಗಿ ಅಭಿನಯಿಸಿರುವ ತಿರುಟ್ಟು ಪಾಯಲೆ – 2 ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ಸುಶಿ ಗಣೇಶನ್ ಅವರು ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಅಮಲಾ ಪೌಲ್ ಆರೋಪಿಸಿದ್ದಾರೆ. ಈ ಮೊದಲು ನಿರ್ದೇಶಕಿ ಲೀನಾ ಮಣಿಮೆಕಲೈ ಸುಶಿ ಗಣೇಶನ್ ಮೇಲೆ ಆರೋಪ ಮಾಡಿದ್ದರು ಅವರ ಬೆಂಬಲಕ್ಕೆ ನಿಂತಿರುವ ಅಮಲಾ ಪೌಲ್ ಆತ ನನ್ನ ಬಳಿಯೂ ಅಸಭ್ಯವಾಗಿ ನಡೆದುಕೊಂಡಿದ್ದ. ನಾನು ಸಂಪೂರ್ಣವಾಗಿ ಲೀನಾ ಮಣಿಮೆಕಲೈ ಅವರಿಗೆ ಬೆಂಬಲ ಸೂಚಿಸುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.











