ಬೆಂಗಳೂರು: ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ದ ಮೀ ಟೂ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಪರ ಮಾತನಾಡಿದ್ದ ನಟ ಪ್ರಕಾಶ್ ರೈ ಅವರ ಹೇಳಿಕೆಗಳು ಅನೇಕರ ಅಸಮಾಧಾನಕ್ಕೆ ಕಾರಣವಾಗಿತ್ತು.ಆದರೆ ಈಗ ಪ್ರಕಾಶ್ ರೈ ಅವರು ಟ್ವೀಟ್ ಮೂಲಕ ಅರ್ಜುನ್ ನನ್ನ ಬಹುಕಾಲದ ಗೆಳೆಯ. ಸಹ ಪ್ರಯಾಣಿಕ. ಆತನನ್ನು ನಾನು ತುಂಬಾ ಚೆನ್ನಾಗಿ ನಿಮ್ಮೆಲ್ಲರಿಗಿಂತ ಆಂತರಿಕವಾಗಿ ಬಲ್ಲೆ. ನಾನು ಎಲ್ಲೂ ಆತನನ್ನು ಸಾರಾಸಗಟಾಗಿ ಅಪರಾಧಿ ಎನ್ನಲಿಲ್ಲ ಎಂದಿದ್ದಾರೆ. ಆಚಾರ ವಿಚಾರಗಳಿಲ್ಲದ ನಾಲಿಗೆಗಳು ತಮ್ಮ ನೀಚ ಬುದ್ದಿಯಿಂದ ತಮ್ಮ ತಮ್ಮ ಹಿತಾಸಕ್ತಿಗಳ ಬೇಳೆ ಬೇಯಿಸಿಕೊಳ್ಳುತ್ತಾ ಮೀಟೂ ಅಭಿಯಾನವನ್ನು ದಾರಿ ತಪ್ಪಿಸುವ ಮುನ್ನ ಜಸ್ಟ್ ಆಕ್ಸಿಂಗ್ ಎಂದು ಟ್ವೀಟ್ ಮಾಡಿದ್ದಾರೆ .
ಯಾರ ಬಗ್ಗೆಯೂ ಅರ್ಥವಿಲ್ಲದ ದೂಷಣೆ ಮಾಡುವವನು ನಾನಲ್ಲ. ಶ್ರುತಿ ಎಲ್ಲರೂ ದೂಷಿಸಿರುವಂತೆ ಅವಕಾಶವಾದಿ ಹೆಣ್ಣು ಮಗಳಲ್ಲ. ಅಪ್ಪಟ ಪ್ರತಿಭಾವಂತೆ. ದಿಟ್ಟ ಹೆಣ್ಣು ನಮ್ಮೆಲ್ಲರಂತೆ ಇವರನ್ನೂ ಬೆಳೆಸಿರುವುದು ನಮ್ಮ ಸಮಾಜವೇ.ಇಬ್ಬರೂ ಚಿತ್ರರಂಗದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಬೇಕಾದವರು ಮಾಡಲು ಸಾಧ್ಯವಿರುವವರು. ಈ ಸತ್ಯದ ಹಿನ್ನಲೆಯಲ್ಲಿ ನಾನು ತುಂಬಾ ಮಾರ್ಮಿಕವಾಗಿ ಕೇಳುತ್ತಿರುವ ಸೂಕ್ಷ್ಮತೆಯ ಪ್ರತಿಕ್ರಿಯೆ ಎಲ್ಲರಿಗೂ ಅರ್ಥವಾದರೆ ಒಳಿತು. ಪಕ್ಷ ಪಕ್ಷಪಾತವಿಲ್ಲದೆ ಪೂರ್ವಗ್ರಹ ಪೀಡಿತರಲ್ಲದ ಕೆಲವು ಹಿರಿಯರು ಇಬ್ಬರನ್ನು ಕರೆಸಿ ಕೂರಿಸಿ ತಕ್ಷಣವೆ ಇತ್ಯರ್ಥಿಸಿ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.











