ವಿದ್ಯುತ್ ತಂತಿ ತಗುಲಿ 7 ಆನೆಗಳ ದುರ್ಮರಣ…

315
firstsuddi

ಭುವನೇಶ್ವರ್: ಆಹಾರ ಹುಡುಕಿಕೊಂಡು ತೆರಳುತ್ತಿದ್ದ ಆನೆಗಳಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಏಳು ಆನೆಗಳು ದಾರುಣವಾಗಿ ಮೃತಪಟ್ಟ ಘಟನೆ ಒಡಿಶಾದ ಧೆಂಕನಲ್ ಜಿಲ್ಲೆಯಲ್ಲಿ ನಡೆದಿದ್ದು, ರೈಲ್ವೆಯ ಹೊಸ ಮಾರ್ಗ ನಿರ್ಮಾಣಕ್ಕೆಂದು ಭಾರೀ ವಿದ್ಯುತ್ ತಂತಿಗಳನ್ನು ಈ ಸ್ಥಳದಲ್ಲಿ ಹಾಕಲಾಗಿದ್ದು, ಸುಮಾರು  13 ಆನೆಗಳು ಆಹಾರ ಹುಡುಕಿಕೊಂಡು ಈ ಮಾರ್ಗವಾಗಿ ಹೋಗುತ್ತಿದ್ದ ವೇಳೆ ಏಳು ಆನೆಗಳಿಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿವೆ. 7 ಆನೆಗಳ ಶವಗಳನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.