ಮೂಡಿಗೆರೆ: ಚಾರ್ಜ್ ಗೆ ಇಟ್ಟಿದ್ದ ಮೊಬೈಲ್ ಬ್ಲಾಸ್ಟ್…

692
firstsuddi

ಮೂಡಿಗೆರೆ : ಚಾರ್ಜ್ ಆಗಲು ಇಟ್ಟಿದ್ದ ಮೊಬೈಲ್ ಬ್ಲಾಸ್ಟ್ ಆಗಿರುವ ಘಟನೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಬಣಕಲ್ ಶಿಕ್ಷಕ ಅಕ್ರಮ್ ಪಾಷ ಎಂಬುವರ ಮನೆಯಲ್ಲಿ ಸ್ಯಾಮ್ಸಂಗ್ ಎ5 ಮೊಬೈಲ್ ಅನ್ನು ಚಾರ್ಜ್ ಗೆ ಇಟ್ಟ ಕೆಲವೇ ನಿಮಿಷಗಳಲ್ಲಿ ಭಾರಿ ಶಬ್ಧದೊಂದಿಗೆ ಮೊಬೈಲ್ ಸ್ಫೋಟಗೊಂಡು ಹೊತ್ತಿ ಉರಿದಿದೆ. ಮೊಬೈಲ್ ಸ್ಫೋಟದ ಶಬ್ಧಕ್ಕೆ ಮನೆಯವರು ಬೆಚ್ಚಿಬಿದ್ದಿದ್ದಾರೆ.