ಚಿಕ್ಕಮಗಳೂರು : ರಾಮನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಸರಿದ ಹಿಂದೆ ಬಹಳ ದೊಡ್ಡ ರಾಜಕೀಯ ಪಿತೂರಿ ಇದೆ. ಎಂದು ಶಾಸಕ ಸಿ.ಟಿ ರವಿಯವರು ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಕರ್ತರನ್ನ ಬಿಟ್ಟು ಹೊಸ ಪ್ರಯೋಗದ ಮೇಲೆ ಚಂದ್ರಶೇಖರ್ ಗೆ ಟಿಕೆಟ್ ನೀಡಲಾಗಿತ್ತು. ಮೈತ್ರಿ ಅಭ್ಯರ್ಥಿ ಪ್ರಚಾರಕ್ಕೆ ಹೋದಾಗ ಜನಾಕ್ರೋಶ ಎದುರಾಗಿತ್ತು. ಹೊಸ-ಹೊಸ ಪ್ರಯೋಗದ ಮೂಲಕ ಪಕ್ಷ ಬೆಳೆದಿದೆ. ರಾಜಕೀಯದಲ್ಲಿ ಎಚ್ಚರಿಕೆ ಅಗತ್ಯ, ಸೋಲನ್ನು ಸವಾಲಾಗಿ ಸ್ವೀಕಾರ ಮಾಡಿದ್ದೇವೆ. ಅನುಭವ ದೊಡ್ಡ ಪಾಠ ಕಲಿಸಿದೆ ಪಕ್ಷಕ್ಕೆ ಇದು ಎಚ್ಚರಿಕೆ ಪಾಠ ಪಕ್ಷ ಬೆಳೆಯುವ ಹಂತದಲ್ಲಿ ಅಪಮಾನ, ನೋವು ಅನುಭವಿಸಿದೆ. ಠೇವಣಿ ನಷ್ಟವಾದಾಗ್ಲು ಕಾರ್ಯಕರ್ತರು, ನಾಯಕರು ವಿಶ್ವಾಸ ಕಳೆದುಕೊಳ್ಳಲಿಲ್ಲ. ನಮ್ಮದ್ದು ಸೈದ್ದಾಂತಿಕ ಆಧಾರದ ರಾಜಕೀಯ ಪಕ್ಷ ಚುನಾವಣೆ ಸೋಲು-ಗೆಲುವುಗಳು, ಫಲಿತಾಂಶ ಬೈ ಪಾಡೆಕ್ಟ್. ನಮ್ಮದ್ದು ಸಿದ್ದಾಂತಕ್ಕೆ ಕೆಲಸ ಮಾಡುವ ಪಕ್ಷವಾದ ಹಿನ್ನೆಲೆ ಸೋಲಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಸಂಘಟನೆಗೆ ಕೆಲಸ ಮಾಡ್ತೀವಿ ಎಂದಿದ್ದಾರೆ.









