ಕಳಸ:ಸಂಘಗಳಲ್ಲಿ ಯಾವಾಗ ರಾಜಕೀಯ ಬರುತ್ತದೆಯೋ ಆಗ ಸಂಘಗಳು ಒಡೆದು ಹೋಗುವ ಸಂದರ್ಭಗಳು ಹೆಚ್ಚಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ ಗೌಡ ಹೇಳಿದರು.
ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಬಸ್ರಿಕಲ್ ಸಂಸೆ ಇವರ ವತಿಯಿಂದ ಬಸ್ರಿಕಲ್ ಸಮುದಾಯ ಭವನದಲ್ಲಿ ಗುರುವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದ ಅವರು ರಾಜಕೀಯ ಅವರವರಿಗೆ ಸಂಬಂದಿಸಿದ್ದು ಅದನ್ನು ಸಂಘದೊಳಗೆ ತರದೆ ಒಗ್ಗಟ್ಟಿನಿಂದ ಸಂಘಗಳನ್ನು ಕಟ್ಟಬೇಕು ಇದರಿಂದ ಸಂಘಗಳು ಒಡೆದುಹೋಗದೆ ಗಟ್ಟಿಯಾಗಿ ಅಭಿವೃದ್ಧಿಗೊಳ್ಳುತ್ತದೆ.ಯುವಕರು ಹೆಚ್ಚಾಗಿ ಸಂಘದಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಂಘವನ್ನು ಕಟ್ಟಬೇಕು.ಇಲ್ಲಿ ಒಕ್ಕಲಿಗ ಸಮುದಾಯ ಭವನಕ್ಕೆ ಬೇಡಿಕೆ ಇದೆ.ಇದಕ್ಕೆ ಬೇಕಾಗುವ ಎಲ್ಲಾ ಸವಲತ್ತುಗಳಿಗೆ ನಾನು ಸಹಕರಿಸುತ್ತೇನೆ ಎಂದು ಹೇಳಿದರು.
ಮೂಡಿಗೆರೆ ತಾಲ್ಲೂಕು ಎಪಿಎಂಸಿ ಅಧ್ಯಕ್ಷ ಸಂತೋಷ್ ಹಿನಾರಿ ಮಾತನಾಡಿ ಜಿಲ್ಲೆ ಮತ್ತು ರಾಜ್ಯ ಒಕ್ಕಿಲಿಗರ ಸಂಘಗಳಲ್ಲಿ ಹೆಚ್ಚಾಗಿ ಸದಸ್ಯತ್ವವನ್ನು ಪಡೆದು ನಾವು ಮುಂಚೂನಿಗೆ ಬರಬೇಕು ಎಂದು ಹೇಳಿದರು.
ಮರಸಣಿಗೆ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ ಗೌಡ ಮಾತನಾಡಿ ಸಂಘದಲ್ಲಿ ಸಂಘರ್ಷವನ್ನು ಬೆಳೆಸಿಕೊಳ್ಳದೆ ಪರಸ್ಪರ ಸಹಬಾಳ್ವೆಯನ್ನು ವ್ಯಕ್ತಪಡಿಸಿದಾಗ ಸಂಘ ಇನ್ನಷ್ಟು ಅಭಿವೃದ್ಧಿಗೊಳ್ಳುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಟಿ ವೈದ್ಯ ನಾಗಪ್ಪ ಗೌಡ ಇವರನ್ನು ಸನ್ಮಾನಿಸಲಾಯಿತು.ಅಲ್ಲದೆ ಒಕ್ಕಲಿಗರಿಗೆ ಆಟೋಟ ಸ್ಪರ್ದೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಸಿ.ಮಂಜುನಾಥ್,ಕಾರ್ಯದರ್ಶಿ ಬಿ.ಕೆ.ಮಹೇಶ್,ಮುಖ್ಯ ಅಥಿತಿಗಳಾಗಿ ವಿಶ್ವನಾಥ್ ಗೌಡ,ಸಂದೀಪ್ ಗೌಡ,ಜಯಂತ ಗೌಡ,ಜಗದೀಶ್ ಗೌಡ,ಶಶಿಧರ ಗೌಡ,ರಾಜಪ್ಪ ಗೌಡ,ಭಾಸ್ಕರ ಗೌಡ,ಸುರೇಂದ್ರ ಗೌಡ ಇತರರು ಇದ್ದರು.
Home ಸ್ಥಳಿಯ ಸುದ್ದಿ ಯುವಕರು ಹೆಚ್ಚಾಗಿ ಸಂಘದಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಂಘವನ್ನು ಕಟ್ಟಬೇಕು: ಕೆ.ಆರ್.ಪ್ರಭಾಕರ ಗೌಡ…










