ವಿಷ ಕುಡಿದು ನವವಿವಾಹಿತೆ ಆತ್ಮಹತ್ಯೆ…

346
firstsuddi

ಹಾಸನ: ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೆ ನವವಿವಾಹಿತೆಯೊಬ್ಬರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವಿಜಯನಗರ ಬಡಾವಣೆಯಲ್ಲಿ ನಡೆದಿದ್ದು, ನೇಹಾ ಷರೀಫ್ (29) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ಐದು ತಿಂಗಳ ಹಿಂದೆ  ಆದಿಲ್ ಷರೀಫ್ ಎಂಬುವವರೊಂದಿಗೆ ಮದುವೆ ನಡೆದಿತ್ತು.ಮದುವೆಯ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಹಣ, ಚಿನ್ನಾಭರಣ ವಸ್ತುಗಳನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ಮದುವೆಯಾದ ನಂತರವೂ ವರದಕ್ಷಿಣೆ ತರುವಂತೆ ನೇಹಾ ಅವರಿಗೆ ಪ್ರತಿನಿತ್ಯ ಹಿಂಸೆ ನೀಡುತ್ತಿದ್ದರು ಎಂದು ನೇಹಾ ಅವರು ವಿಷ ಕುಡಿಯುವ ಮೊದಲು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾವಿಗೆ ಕಾರಣವನ್ನು ತಿಳಿಸಿ ಬಳಿಕ ನೇಹಾ ಅವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.