ಏ…ಕಾಣ್ತಿಲ್ಲ…ಟಾರ್ಚ್ ತನ್ರೋ- ರೆಬಲ್ ಸ್ಟಾರ್ ಅಂಬರೀಶ್…

434
firstsuddi

ಮಂಡ್ಯ : ಮಂಡ್ಯ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ರೆಬಲ್ ಸ್ಟಾರ್ ಅಂಬರೀಶ್ ಅವರು ತಮ್ಮ ಸ್ವ ಗ್ರಾಮ ದೊಡ್ಡರಸಿನಕೆರೆಯ ಮತಗಟ್ಟೆ ಸಂಖ್ಯೆ 164ರಲ್ಲಿ ಮತ ಚಲಾವಣೆ ಮಾಡಿದರು. ಮತದಾನದ ವೇಳೆ ಬೆಳಕಿನ ಸಮಸ್ಯೆ ಎದುರಾಗಿದ್ದರಿಂದ ಏ… ಕಾಣ್ತಿಲ್ಲ. ಟಾರ್ಚ್ ತನ್ರೋ ಎಂದು ಹೇಳಿದರು. ಕೂಡಲೇ ಅಲ್ಲಿದ್ದ ಸಿಬ್ಬಂದಿ ಮೊಬೈಲ್ ಟಾರ್ಚ್ ಆನ್ ಮಾಡಿ ಕೊಟ್ಟರು. ಬಳಿಕ ಮತ ಚಲಾಯಿಸಿ ಅಂಬರೀಶ್ ಹೊರಬಂದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಚುನಾವಣೆಯಲ್ಲಿ ಉತ್ಸಾಹವೇ ಇಲ್ಲ. ಮೂರು ತಿಂಗಳಿಗಾಗಿ ಚುನಾವಣೆ ನಡೆಯುತ್ತಿದೆ. ಮತ್ತೆ ಚುನಾವಣೆ ಬರಲಿದ್ದು, ಈ ಚುನಾವಣೆ ಸರಿ ಇಲ್ಲ . ಐದಕ್ಕೆ ಐದು ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಗೆಲ್ಲಲಿದೆ ಎಂದಿದ್ದಾರೆ.