ಬಾಳೆಹೊನ್ನೂರು :ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾದ ಯುವಕ…

374

ಚಿಕ್ಕಮಗಳೂರು: ಯುವಕನೋರ್ವ ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾಗಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ಬಾಳೆಹೊನ್ನೂರಿನ ಶ್ರೀರಂಭಾಪುರಿ ಸವಿ೯ಸ್ ಸ್ಟೇಷನ್ ನಲ್ಲಿ ಸ್ಕೂಟಿಯಲ್ಲಿ ಓರ್ವ ಯುವಕ ಬಂದು 300 ರೂಪಾಯಿ ಪೆಟ್ರೋಲ್ ಹಾಕಿಸಿ ಮೊದಲಿಗೆ ಎಟಿಎಂ ಕೊಟ್ಟಿದ್ದಾನೆ. ಎಟಿಎಂನಲ್ಲಿ ಹಣ ಇಲ್ಲ ಕಾರಣ ಪೆಟ್ರೋಲ್ ಬಂಕ್ ಯುವಕ ಹಣ ಕೇಳಿದ್ದಾನೆ. ಹಣ ಕೇಳುತ್ತಿದಂತೆ ಸ್ಕೂಟಿಯಲ್ಲಿದ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ. ಯುವಕ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.