ಚಿಕ್ಕಮಗಳೂರು: ಮಾನಸಿಕ ಅಸ್ವಸ್ಥ ಮಹಿಳೆಯೋರ್ವಳು ಮಚ್ಚು ಹಿಡಿದು ಬಸ್ ನಿಲ್ದಾಣದಲ್ಲಿ ಓಡಾಡಿರುವ ಘಟನೆ ನಗರದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ರಾತ್ರಿ ನಡೆದಿದೆ. ಮಾನಸಿಕ ಅಸ್ವಸ್ಥ ಮಹಿಳೆ ಕೈಯಲ್ಲಿ ಮಚ್ಚು ಹಿಡಿದು ಹತ್ತಿರ ಬಂದರೆ ತಲೆ ಕಡಿದು ಬಿಡುತ್ತೇನೆ ಎಂದು ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದನ್ನು ನೋಡಿ ಪ್ರಯಾಣಿಕರು ಗಾಬರಿಗೊಂಡಿದ್ದು, ಸಾರ್ವಜನಿಕರು ಮಚ್ಚು ಕಸಿದುಕೊಳ್ಳಲು ಯತ್ನಿಸಿ ವಿಫಲವಾದಾಗ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ನಗರ ಠಾಣಾ ಪೊಲೀಸರು ಮಹಿಳೆ ಕೈಯಿಂದ ಮಚ್ಚನ್ನು ಕಿತ್ತುಕೊಂಡಿದ್ದಾರೆ. ನಂತರ ಮಾನಸಿಕ ಅಸ್ವಸ್ಥ ಮಹಿಳೆ ಬಸ್ ನಿಲ್ದಾಣದಿಂದ ಹೊರಹೋಗಿದ್ದಾರೆ.









