ಹಾಸನ: ರೇವಣ್ಣ ಬದುಕಿರೋವರೆಗೂ ಶಾಸಕರಾಗಿರುತ್ತಾರೆ ಎಂಬ ಸಚಿವೆ ಜಯಮಾಲಾ ಅವರ ಹೇಳಿಕೆಗೆ ಮಾಜಿ ಸಚಿವ ಎ ಮಂಜು ಅವರು ಪ್ರತಿಕ್ರಿಯೆ ನೀಡಿದ್ದು, ಜಯಮಾಲಾ ಅವರು ಶ್ರವಣಬೆಳಗೊಳಕ್ಕೆ ಬಂದಿರುವುದು ಸರ್ಕಾರದ ಕಾರ್ಯಕ್ರಮಕ್ಕಾಗಿ ಅಲ್ಲಿ ಏನು ಮಾತನಾಡಬೇಕು ಅದನ್ನು ಮಾತನಾಡದೆ ಯಾರನ್ನು ಓಲೈಕೆ ಮಾಡುವಂತೆ ಮಾತನಾಡಿದ್ದಾರೆ.ರಾಜಕೀಯವೆಂದರೆ ಸಿನಿಮಾವಲ್ಲ, ಸಿನಿಮಾದಲ್ಲಿ ಡೈಲಾಗ್ ಹೊಡೆದ ರೀತಿ ಇಲ್ಲಿ ಮಾತನಾಡಲಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.










