ಹೀಗೆ ಮಾಡಿ… ಅನುಮಾನವೇ ಬೇಡ…. ನಿಮ್ಮದು ದಿನವೂ ಮೊದಲ ರಾತ್ರಿಯೇ….

3776
  •  ಜೀವನದಲ್ಲಿ ಪ್ರತಿಯೊಂದಕ್ಕೂ ರೀತಿ-ನೀತಿ ರಿವಾಜುಗಳಿವೆ. ಯಾವ ಸಮದಲ್ಲಿ ಯಾವ ಕೆಲಸ ಮಾಡಬೇಕೋ ಹಾಗೇ ಮಾಡಬೇಕು. ಅದೇ ರೀತಿ ಸೆಕ್ಸ್ ಗೂ ಕೂಡ ಕೆಲ ನಿಯಾಮವಳಿಗಳಿವೆ. ಅದು ಹಾಗೇ ಇದ್ರೆ ಸಂಸಾರ ಹಾಗೂ ದಾಂಪತ್ಯ ಸಂಪೂರ್ಣ ಸುಖಮಯವಾಗಿರತ್ತೆ. ನನ್ನ ಕೆಲಸ ಮುಗಿಯಿತು ಎಂದು ಸೆಕ್ಸ್ ಆದ ಬಳಿಕ ಮಲಗಿದರೆ ಅದು ಸುಖವೂ ನೀಡೋದಿಲ್ಲ, ನಿಮ್ಮ ಸಂಗಾತಿಗೆ ಸಮಾಧಾನವೂ ಆಗೋದಿಲ್ಲ. ಆರಂಭದಿಂದ ಅಂತ್ಯದವರೆಗೂ ಸಂಪೂರ್ಣ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರೆ ನಿಮಗೂ ಹಾಗೂ ನಿಮ್ಮ ಸಂಗಾತಿಗೂ ಶೇಕಡಾ ನೂರಕ್ಕೆ ನೂರರಷ್ಟು ತೃಪ್ತಿ ಸಿಕ್ಕಂತಾಗುತ್ತದೆ. ಬಹುತೇಕ ಮಂದಿ ಮಡದಿಯನ್ನ ಯಂತ್ರದಂತೆ ಬಳಸಿದ ಕೂಡಲೇ ನಿದ್ರೆಗೆ ಜಾರಿ ಬಿಡ್ತಾರೆ. ಅವಳೊಬ್ಬಳು ಭೋಗದ ವಸ್ತು ಎಂಬಂತೆ ತಮ್ಮ ದಾಹವನ್ನ ಇಳಿಸಿಕೊಂಡ ಕೂಡಲೇ ಗೊರಕೆ ಹೊಡೆಯೋಕೆ ಶುರುವಿಟ್ರೆ ಸೆಕ್ಸ್ ಲೈಫ್ ಜೊತೆ ವೈವಾಹಿಕ ಜೀವನವೂ ಬೀದಿಗೆ ಬಂದು ನಿಲ್ಲೋದ್ರಲ್ಲಿ ಎರಡು ಮಾತಿಲ್ಲ. ಸೆಕ್ಸ್ ಬಳಿಕ ಏನ್ ಮಾಡ್ಬೇಕ್, ಏನ್ ಮಾಡ್ಬಾರ್ದು ಎಂಬುದನ್ನ ಅರಿತ್ರೆ ನಿಮಗೆ ದಿನವೂ ಫಸ್ಟ್ ನೈಟ್ ಆಗೋದ್ರಲ್ಲಿ ಎರಡು ಮಾತಿಲ್ಲ.

ಸೆಕ್ಸ್ ನಡೆಸಿದ ಕೂಡಲೇ ಮಲಗೋದು ಎಲ್ಲರೂ ಮಾಡೋ ದೊಡ್ಡ ತಪ್ಪು. ಲೈಂಗಿಕ ಕ್ರಿಯೆ ನಡೆಸಿದ ಕೂಡಲೇ ಮುಗಿತು ಎಂದು ಮಲಗಿದ್ರೆ ಅದು ನಿಮ್ಮ ಮಡದಿಗೆ ತೃಪ್ತಿ ಸಿಗೋದಿಲ್ಲ. ಅದಕ್ಕೂ ಮಿಗಿಲಾಗಿ ನಿಮ್ಮ ಬಗ್ಗೆ ಅವರಿಗೆ ಬೇರೆಯದ್ದೇ ಭಾವನೆ ಬರುತ್ತೆ. ಆಕೆ ನಿಮ್ಮ ಅರ್ಧಾಂಗಿ.  ನಿಮ್ಮನ್ನೆ ನೆಚ್ಚಿಕೊಂಡಿರೋಳು. ಆಕೆಗೆ ನಾನು ಇವ್ರಿಗೆ ಇದಕ್ಕೆ ಬೇಕಾ ಎಂದು ಅನ್ನಿಸಬಾರದು.

ಮಿಲನ ಕ್ರಿಯೆ ಬಳಿಕ ಅಥವ ನಡೆಸುವ ಸಂದರ್ಭದಲ್ಲಿ ಪದೇ ಪದೇ ವಾಶ್‌ ರೂಂಗೆ ಹೋಗಬೇಡಿ. ಸ್ನಾನ ಮಾಡೋದು, ಕ್ಲೀನ್ ಮಾಡಿಕೊಳ್ಳೋದು ಮಾಡಬೇಡಿ. ನಿಮ್ಮ ಈ ಬಿಹೇವಿಯರ್ ಆಕೆಗೆ ನಾನು ಒಂಟಿ ಎಂಬ ಫೀಲ್ ತರುತ್ತೆ. ಅದರ ಬದಲಾಗಿ ಆಕೆಯೊಂದಿಗೆ ಸ್ನಾನ ಮಾಡೋದು ಒಳ್ಳೆಯದು. ಆಗ ಮತ್ತೊಮ್ಮೆ ಅಲ್ಲಿ ಏನ್ ಬೇಕಾದ್ರು ನಡೆಯಬಹದು.

ಒಂದು ವೇಳೆ ನೀವು ರತಿ ಕ್ರೀಡೆಯ ಬಳಿಕ ಮಲಗಿಬಿಟ್ರೆ ಆಕೆಯ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತೆ. ಆಗ ನಾಳಿನ ಮಿಲನಕ್ಕೆ ಆಕೆ  ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಿಲ್ಲ. ಆಕೆಗೂ ಮುಗಿದ್ರೆ ಸಾಕು ಅನ್ನಿಸಿಬಿಡುತ್ತೆ.  ಅದಕ್ಕೆ ಪ್ರಮುಖ ಕಾರಣ ನಿಮ್ಮ ನಡವಳಿಕೆ. ಸಂಬಂಧ ಉಳಿಸಿಕೊಳ್ಳುವ ದೃಷ್ಠಿಯಲ್ಲಿ ಆ ನಡವಳಿಕೆ ಒಳ್ಳೆಯದಲ್ಲ.

ಸೆಕ್ಸ್ ನಡೆದ ಬಳಿಕ ಕನಿಷ್ಠ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಆಕೆಯೊಂದಿಗೆ ಮಾತನಾಡಿ. ಕಷ್ಟ-ಸುಖ, ಬೇಕು-ಬೇಡಗಳ ಕುರಿತು ಚರ್ಚಿಸಿ. ಆಗ ಸಂಬಂಧವೂ ಗಟ್ಟಿಯಾಗುತ್ತೆ, ಸಂಸಾರವೂ ಚೆನ್ನಾಗಿರುತ್ತೆ. ಆಗ ಆಕೆ ಕೂಡ ರಾತ್ರಿಗಾಗಿ ಕಾಯ್ತಾಳೆ.

ಬಹುತೇಕರು ಮಾಡೋ ದೊಡ್ಡ ತಪ್ಪು ಅಂದ್ರೆ ಸೆಕ್ಸ್ ಆದ ಬಳಿಕ ಬೇರೆ ಮಲಗೋದು ಅಥವ ಆಚೀಚೆ ತಿರುಗಿ ಮಲಗೋದು. ಹೀಗೆ ಮಾಡಿದ್ರೆ, ಆಕೆಗೆ ನೀವು ಆಕೆಯನ್ನ ಯಾವ ದೃಷ್ಠಿಯಲ್ಲಿ ನೋಡ್ತಿದ್ದೀರಾ, ನಿಮಗೆ ಹೆಂಡತಿ ಯಾಕೆ ಬೇಕು, ಯಾವಾಗ ಬೇಕು ಎಂಬ ಹತ್ತಾರು ಆಲೋಚನೆಗಳು ಆಕೆ ಮನಸಲ್ಲಿ ಮೂಡುತ್ವೆ. ಆಗ ಮತ್ತೊಮ್ಮೆ ಸಂಸಾರದಲ್ಲಿ ಬಿರುಕು ಉಂಟಾಗುತ್ತೆ. ಅದಕ್ಕಾಗಿ ಬಾಕಿಯಂತೆ ಇತರೇ ಸಮಯದಲ್ಲಿ ಹೇಗಾದ್ರು ಮಲಗಿಕೊಳ್ಳಿ,  ಆದ್ರೆ, ಸೆಕ್ಸ್ ಬಳಿಕ ಜೊತೆಯಾಗಿ ಮಲಗಿ. ಅದು ನಿಮ್ಮ ಸಂಸಾರ ಹಾಗೂ ಸಂಬಂಧವನ್ನ ಮೇಲ್ದರ್ಜೆಗೇರಿಸುವುದು ಖಂಡಿತ.

ಹೆಚ್ಚಿನ ದಂಪತಿಗಳು ಸೆಕ್ಸ್ ನ ಬಳಿಕ ಮಕ್ಕಳನ್ನ ಜೊತೆಯಲ್ಲೇ ಮಲಗಿಸಿಕೊಳ್ತಾರೆ. ಆದ್ರೆ, ಇದೂ ತಪ್ಪು. ಸೆಕ್ಸ್ ನ ಬಳಿಕದ ಸಮಯವನ್ನ ನಿಮ್ಮ ಮಡದಿಗೆಂದೇ ಮೀಸಲಿಡಿ. ಮಕ್ಕಳನ್ನ ನಿಮ್ಮ ಹತ್ತಿರದ ಕೋಣೆ ಅಥವ ತಂದೆ-ತಾಯಂದಿರ ಜೊತೆ ಮಲಗಿಸಿ. ಅಲ್ಲಿ ನಿಮ್ಮ ಸಂಗಾತಿಗೆ ನೀವೆ ಎಲ್ಲಾ ಎಂಬ ಭಾವನೆ ಬರಬೇಕು.

 

LEAVE A REPLY

Please enter your comment!
Please enter your name here