ಸಿಸಿಬಿ ಕಚೇರಿಗೆ ಆಗಮಿಸಿದ ಜನಾರ್ದನ  ರೆಡ್ಡಿ…

354
firstsuddi

ಬೆಂಗಳೂರು: ಆ್ಯಂಬಿಡೆಂಟ್​ ಕಂಪನಿ ಅವ್ಯವಹಾರ ಪ್ರಕರಣದ ವಿಚಾರಣೆಗಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು   ಬೆಂಗಳೂರಿನ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.ನಿನ್ನೆ ಸಿಸಿಬಿ ಪೊಲೀಸರು ನೀಡಿದ ನೋಟಿಸ್​ ಬೆನ್ನಲ್ಲೇ ಇಂದು ಜನಾರ್ದನ  ರೆಡ್ಡಿಯವರು ತಮ್ಮ ವಕೀಲರುಗಳಾದ ಸಿ ಎಚ್​ ಹನುಮಂತರಾಯಪ್ಪ ಮತ್ತು ​ ಚಂದ್ರಶೇಖರ್​ ಜೊತೆ ಕಚೇರಿಗೆ ಆಗಮಿಸಿದ್ದು, ರೆಡ್ಡಿಯವರನ್ನು ತನಿಖಾಧಿಕಾರಿ  ವೆಂಕಟೇಶ್ ಪ್ರಸನ್ನ ಅವರು ವಿಚಾರಣೆ ನಡೆಸುತ್ತಿದ್ದಾರೆ.