ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಸ್ಫೋಟ, ಚಾಲಕ ಸಜೀವ ದಹನ…

245
firstsuddi

ಶಿವಮೊಗ್ಗ:ಸಿಲಿಂಡರ್ ತುಂಬಿದ ಲಾರಿ ಸ್ಫೋಟಗೊಂಡ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಸುಮಾರು ನಾಲ್ಕೂವರೆ ಗಂಟೆಗೆ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಮಧ್ಯೆ ಇರುವ ಮುಂಡಿಗೆಹಳ್ಳ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ಸಿಲಿಂಡರ್​ ಸ್ಫೋಟಗೊಂಡು ತಕ್ಷಣ ಬೆಂಕಿ ಹೊತ್ತಿಗೊಂಡಿದೆ. ಸ್ಪೋಟಗೊಂಡ ಪರಿಣಾಮ ಲಾರಿಯಲ್ಲಿದ್ದ  ಚಾಲಕ ಕೃಷ್ಣಮೂರ್ತಿ ಸಜೀವ ದಹನವಾಗಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.