ಸಬ್ ಇನ್ ಸ್ಪೆಕ್ಟರ್ ನಿಂದ ಆರೋಪಿಗೆ ಡಾನ್ಸ್ ಮಾಡುವಂತೆ ಒತ್ತಾಯ…

307
firstsuddi

ಕೋಲಾರ: ಪಿಎಸ್ಐ ಒಬ್ಬರು ತೆಲುಗು ಹಾಡಿಗೆ  ಡ್ಯಾನ್ಸ್ ಮಾಡಿದ್ದಲ್ಲದೆ, ಆರೋಪಿಗೂ ಡ್ಯಾನ್ ಮಾಡುವಂತೆ ಒತ್ತಾಯಿಸಿರುವ ಘಟನೆ ಜಿಲ್ಲೆಯ ಕೆಜಿಎಫ್​ ತಾಲೂಕು  ಬೇತಮಂಗಲ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬೇತಮಂಗಲ ಪೊಲೀಸ್ ​ಠಾಣೆಗೆ ಕರೆತರಲಾಗಿತ್ತು,ಈ ವೇಳೆ ಠಾಣೆಯ ​ಪಿಎಸ್ಐ ವೋರ್ವರು ಆರೋಪಿಗೆ  ತೆಲುಗಿನ ಗಬ್ಬರ್ ಸಿಂಗ್  ಡಾನ್ಸ್ ಮಾಡುತ್ತಾ ಆರೋಪಿಯನ್ನು ಡಾನ್ಸ್  ಮಾಡುವಂತೆ ಒತ್ತಾಯಿಸಿ,ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.  ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಹಳಷ್ಟು ಚರ್ಚೆಗೆ ಕಾರಣವಾಗಿದೆ.