ತೆಲಂಗಾಣ : ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ತೃತೀಯಲಿಂಗಿ ಅಭ್ಯರ್ಥಿ ನಾಪತ್ತೆ…

192
firstsuddi

ಹೈದರಾಬಾದ್​:ಡಿಸೆಂಬರ್‌ 7ರ  ತೆಲಂಗಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ 32 ವರ್ಷದ ತೃತೀಯಲಿಂಗಿ ಮಹಿಳಾ ಕಾರ್ಯಕರ್ತೆ ನಿನ್ನೆಯಿಂದ ನಾಪತ್ತೆಯಾಗಿದ್ದು, ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದೆ.ಸಿಪಿಎಂ ನೇತೃತ್ವದ ಬಹುಜನ್‌ ಎಡ ರಂಗ ಅಥವಾ ಬಿಎಲ್‌ಎಫ್ ನ ಟಿಕೆಟ್‌ನಿಂದ ನಗರದ ಗೋಶಮಹಲ್‌ ಕ್ಷೇತ್ರದಿಂದ  ಟಿಕೆಟ್​ ಪಡೆದಿದ್ದ,  ಚಂದ್ರಮುಖಿ ಎಂ  ಅವರು ಈಗ ನಾಪತ್ತೆಯಾಗಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ಮುಕೇಶ್ ಗೌಡ್ ಮತ್ತು ಬಿಜೆಪಿ ನಾಯಕ ಟಿ. ರಾಜಾ ಸಿಂಗ್ ವಿರುದ್ಧ ಸ್ಪರ್ದಿಸಿದ್ದರು . ಚಂದ್ರಮುಖಿ ಪರವಾಗಿ ಚುನಾವಣಾ ಪ್ರಚಾರ ಮಾಡಲು ತೃತೀಯಲಿಂಗಿ ಸಮುದಾಯದ ಸ್ನೇಹಿತರು ಆಗಮಿಸಿದ್ದರು.ಚಂದ್ರಮುಖಿ  ಮನೆಯಲ್ಲಿಲ್ಲದುದನ್ನು ಕಂಡು ಹುಡುಕಾಟ ನಡೆಸಿದ್ದಾರೆ. ಆದರೆ    ಚಂದ್ರಮುಖಿ ಎಲ್ಲೂ  ಪತ್ತೆಯಾಗದ ಹಿನ್ನಲೆಯಲ್ಲಿ   ಬಂಜಾರಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ.ಚಂದ್ರಮುಖಿ ನಾಪತ್ತೆಯಾಗಿರುವುದು ಆಕೆಯ ತಾಯಿಗೆ ತೀವ್ರ  ಆತಂಕಕ್ಕೊಳಗಾಗಿದ್ದಾರೆ.