ಅಜ್ಜಂಪುರ: ಪೇದೆ ಮತ್ತು ಪಿಎಸ್ಐ ನಡುವೆ ಕಿತ್ತಾಟ, ಇಬ್ಬರ ವಿರುದ್ಧವೂ ಎಫ್ಐಆರ್…

1020
firstsuddi

ಚಿಕ್ಕಮಗಳೂರು : ಪೇದೆ ಪಿಎಸ್ಐ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಮತ್ತು ಪೇದೆ ಇಬ್ಬರ ವಿರುದ್ಧವೂ ಎಫ್ಐಆರ್ ದಾಖಲಾಗಿರುವ ಘಟನೆ ಜಿಲ್ಲೆಯ ಅಜ್ಜಂಪುರದಲ್ಲಿ ನಡೆದಿದೆ. ಕಳೆದ 20ರಂದು ಬಂಕನಕಟ್ಟೆ ಜಾತ್ರೆ ವೇಳೆ ಅಜ್ಜಂಪುರ ಪಿಎಸ್ಐ ರಫೀಕ್ ಹಾಗೂ ಲಕ್ಕವಳ್ಳಿ ಪೇದೆ ಶಿವಣ್ಣ ಇಬ್ಬರ ನಡುವೆ ಸಾರ್ವಜನಿಕ ಸ್ಥಳದಲ್ಲೇ ಕಿತ್ತಾಟ ನಡೆದಿತ್ತು.ಪಿಎಸ್ಐ ಹಲ್ಲೆ ಮಾಡಿ ಕೆಟ್ಟದಾಗಿ ಬೈದಿದ್ದರೆಂದು ಪೇದೆ ಶಿವಣ್ಣ ಅವರು ಆರೋಪಿಸಿದ್ದು, ಪಿಎಸ್ಐ ವಿರುದ್ಧ ದೂರು ದಾಖಲಿಸುವಂತೆ ಶಿವಣ್ಣ ಪತ್ನಿ ಠಾಣೆ ಹಾಗೂ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.ಇಬ್ಬರು ದೂರು ನೀಡಿದ ಹಿನ್ನೆಲೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.