ರಾಜಕೀಯ ಲಾಭಕ್ಕಾಗಿ ರಾಹುಲ್ ಗಾಂಧಿ ತಾನೊಬ್ಬ ದತ್ತಾತ್ರೇಯ ಗೋತ್ರದ ಬ್ರಾಹ್ಮಣ ಎಂದು ಹೇಳಿಕೊಂಡಿದ್ದಾರೆ :ಶೋಭಾ ಕರಂದ್ಲಾಜೆ…

264
firstsuddi

ಚಿಕ್ಕಮಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜಕೀಯ ಲಾಭಕ್ಕಾಗಿ ರಾಹುಲ್ ಗಾಂಧಿ ತಾನೊಬ್ಬ ದತ್ತಾತ್ರೇಯ ಗೋತ್ರದ ಬ್ರಾಹ್ಮಣ ಎಂದು ಹೇಳಿಕೊಂಡಿದ್ದಾರೆ. ನಾವು ಜಾತಿ ಪ್ರಮಾಣ ಪತ್ರವನ್ನು ಅಪ್ಪನ ಜಾತಿ ಆಧಾರದಲ್ಲಿ ಪಡೆಯುತ್ತೇವೆ. ಚರ್ಚ್ ನಲ್ಲಿ ರಾಹುಲ್ ಗಾಂಧಿ ಹೆಸರು ಸೇರ್ಪಡೆ ಯಾಗಿದೆ.ರಾಹುಲ್ ಗಾಂಧಿಗೆ ಬ್ರಾಹ್ಮಣ ಜಾತಿ ಸರ್ಟಿಫಿಕೇಟ್ ಯಾರು ಕೊಟ್ಟದ್ದು? 5 ರಾಜ್ಯಗಳಲ್ಲಿ ನಡೆಯುವ ಚುನಾವಣೆ ಹಿನ್ನೆಲೆ ಅಲ್ಪಸಂಖ್ಯಾತರನ್ನು ಓಲೈಸುವ ಪ್ರಣಾಳಿಕೆಯನ್ನ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಇದು ರಾಷ್ಟ್ರೀಯ ಪಕ್ಷದ ದಿವಾಳಿತನವನ್ನು ತೋರಿಸುತ್ತದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆ ಕಾಂಗ್ರೆಸ್ ಹಾಗೂ ಮಹಾಘಟ್ ಬಂಧನ ನಾಯಕರಲ್ಲಿ ಭೀತಿ ಸೃಷ್ಟಿ ಮಾಡಿದೆ.ರಾಮಜನ್ಮಭೂಮಿ ನಿರ್ಮಿಸಬೇಕು ಎನ್ನುವುದು ಬಿಜೆಪಿಯ ಅಜೆಂಡವಲ್ಲ ಬದಲಾಗಿ ಜನರ ಅಗ್ರಹ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದಿದ್ದಾರೆ