ಚಿಕ್ಕಮಗಳೂರು :ಕೇರಳ ಮೂಲದ ವ್ಯಕ್ತಿಯೊಬ್ಬರ ಬೈಕ್ ಜಿಲ್ಲೆಯ ಹರಿಹರಪುರದ ತುಂಗಾ ನದಿ ದಡದಲ್ಲಿ ಕಂಡು ಬಂದಿದ್ದು, ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಸಂದೀಪ್ ಕೃಷ್ಣ (30) ನಾಪತ್ತೆಯಾಗಿದ್ದ ವ್ಯಕ್ತಿ. ಇವರು ಖಾಸಗಿ ಜಾಹಿರಾತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೇರಳದಲ್ಲಿ ಅವರು ನಾಪತ್ತೆಯಾಗಿರುವ ಪ್ರಕರಣ ದಾಖಲಾದ ಹಿನ್ನಲೆ ಇಂದು ಕೊಪ್ಪಕ್ಕೆ ಕೇರಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಹರಿಹರಪುರದ ತುಂಗಾ ನದಿ ದಡದಲ್ಲಿ ಸಂದೀಪ್ ಕೃಷ್ಣ ಅವರ ಕೆ ಎಲ್ 18, ವಿ 911ನಂಬರ್ ನ ಬೈಕ್ ಪತ್ತೆಯಾಗಿದ್ದು, ಬೈಕ್ ಜೊತೆ ಸಂದೀಪ್ ಕೃಷ್ಣ ಅವರ ಬ್ಯಾಗ್ ಐಡಿಕಾರ್ಡ್ ಪತ್ತೆಯಾಗಿದೆ. ತುಂಗಾ ನದಿ ಹಾಗೂ ಅಕ್ಕಪಕ್ಕದ ಸ್ಥಳಗಳಲ್ಲಿ ಸಂದೀಪ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು .ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










