ಮಾಜಿ ಪ್ರಧಾನಿ ದೇವೇಗೌಡ ಹಾಗೂ ಎಂ ಸಿ ಮನಗೂಳಿ ಅವರ ಪುತ್ಥಳಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು…

352
firstsuddi

ವಿಜಯಪುರ:ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಉಸ್ತುವಾರಿ ಸಚಿವ ಎಂ ಸಿ ಮನಗೂಳಿ ಅವರ ಪುತ್ಥಳಿಗೆ  ದುಷ್ಕರ್ಮಿಗಳು  ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆದಿದೆ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನ ಕ್ಕೆ ಹೋರಾಡಿದ್ದ ಹೆಚ್ ಡಿ ದೇವೇಗೌಡ ಅವರು  ಹಾಗೂ ಎಂ ಸಿ ಮನಗೂಳಿ ಅವರ ಹೋರಾಟದ ನೆನಪಿಗಾಗಿ 2014 ರ  ಫೆಬ್ರುವರಿ 12 ರಂದು ಲೋಕಾರ್ಪಣೆ ಮಾಡಲಾಗಿತ್ತು. ಆದರೆ  ದುಷ್ಕರ್ಮಿಗಳು ತಡರಾತ್ರಿ ಪುತ್ಥಳಿಗೆ ಬೆಂಕಿ ಹಚ್ಚಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ದುಷ್ಕರ್ಮಿಗಳನ್ನು ಪತ್ತೆಹಚ್ಚಲು  ಪೊಲೀಸರು ಬಲೆ ಬೀಸಿದ್ದಾರೆ.