ಬೆಳಗಾವಿ: ಲಾರಿ ಮತ್ತು ಕಾರು ನಡುವೆ ಡಿಕ್ಕಿಯಾಗಿ ಆರು ಮಂದಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಹೀರೆನಂದಿ ಗ್ರಾಮದಲ್ಲಿ ನಡೆದಿದೆ.ಸಂಬಂಧಿಕರೋರ್ವರ ಅಂತ್ಯಕ್ರಿಯೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಹಿರೇನಂದಿ ಗ್ರಾಮದ ಬಳಿ ಕಬ್ಬು ತುಂಬಿದ ಲಾರಿ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಗಂಗವ್ವ ಹುರಳಿ(30), ಕಾಶವ್ವ ಖಂಡ್ರಿ (70), ಯಲ್ಲವ್ವ ಪೂಜಾರಿ (45), ಯಲ್ಲವ್ವ ಗುಂಡಪ್ಪನವರ್ (40), ರೇಣುಕಾ ಸೊಪಡ್ಲಾ (35) ಹಾಗೂ ಮಲ್ಲವ್ವ ಖಂಡ್ರಿ (50) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










