ಚಿಕ್ಕಮಗಳೂರು: ಅಧಿಕಾರದ ಆಸೆಗಾಗಿ ಬೇರೆ ಪಕ್ಷದ ಶಾಸಕರನ್ನು ಸೆಳೆಯುವಂತಹ ಅನೈತಿಕ ರಾಜಕಾರಣವನ್ನು ಬಿಜೆಪಿ ಬಿಡಬೇಕು ಎಂದು ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಹೇಳಿದ್ದಾರೆ.ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಿದ್ದಾಗ ರಚಿಸಲಾಗದೇ ಮರ್ಯಾದೆ ಕಳೆದುಕೊಂಡ ಬಿಜೆಪಿ ನಾಯಕರು ಇದೀಗ ತಮ್ಮ ಅಧಿಕಾರದ ದಾಹಕ್ಕಾಗಿ ಕಾಂಗ್ರೇಸ್ ಶಾಸಕರನ್ನು ಸೆಳೆಯಲು ಯತ್ನಿಸುತ್ತಿರುವುದು ಆ ಮೂಲಕ ರಾಜ್ಯ ಸರ್ಕಾರವನ್ನು ಅಭದ್ರಗೊಳಿಸಲು ಪ್ರಯತ್ನಿಸುತ್ತಿರುವುದು ಕೈಲಾಗದವನು ಮೈ ಪರಚಿಕೊಂಡ ಎಂಬಂತಾಗಿದೆ ಎಂದು ಹೇಳಿಕೆಯಲ್ಲಿ ಲೇವಡಿ ಮಾಡಿದ್ದಾರೆ.
ಬಿಜೆಪಿ ಮುಖಂಡರು ಇನ್ನಾದರೂ ವಾಮಮಾರ್ಗ ಮತ್ತು ಅನೈತಿಕ ರಾಜಕಾರಣವನ್ನು ಬಿಡಬೇಕು, ಮುಂದಿನ ಚುನಾವಣೆಯಲ್ಲಿ ಸಾಧ್ಯವಾದರೆ ಬಹುಮತ ಸಾಧಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬೇಕು, ಅಲ್ಲಿಯವರೆಗೆ ಮೈತ್ರಿ ಸರ್ಕಾರ ಅಭಾದಿತವಾಗಿ ಕೆಲಸ ಮಾಡಲು ಬಿಡಬೇಕು ಎಂದು ಕಿವಿಮಾತು ಹೇಳಿದ್ದಾರೆ.
ನಾವು ಪ್ರಾಮಾಣಿಕರು, ದೇಶಭಕ್ತರು ನೈತಿಕ ಮಾರ್ಗದಲ್ಲಿ ನಡೆಯುವವರು ಎಂದು ಬೀಗುವ ಜಿಜೆಪಿ ಮುಖಂಡರು ಅಧಿಕಾರದ ದಾಹಕ್ಕಾಗಿ ಕುದುರೆ ವ್ಯಾಪಾರ ಮಾಡುವುದು, ಅಭದ್ರತೆ ಸೃಷ್ಟಿಸಿ ಮೈತ್ರಿ ಸರ್ಕಾರಕ್ಕೆ ಕೆಲಸ ಮಾಡಲು ಬಿಡದಿರುವುದು ಎಂಥಹ ನೈತಿಕತೆ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.
Home ಸ್ಥಳಿಯ ಸುದ್ದಿ ಅಧಿಕಾರದ ಆಸೆಗಾಗಿ ಬೇರೆ ಪಕ್ಷದ ಶಾಸಕರನ್ನು ಸೆಳೆಯುವಂತಹ ಅನೈತಿಕ ರಾಜಕಾರಣವನ್ನು ಬಿಜೆಪಿ ಬಿಡಬೇಕು: ಕೆ.ವಿ.ಶಿವಕುಮಾರ್…










