ಮೈಸೂರು: ಹುಲಿ ಹಿಡಿಯಲು ತೆರಳಿದ್ದ ಆನೆ ಕಾಡಿನೊಳಗೆ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ಬಳಿಯ ಅಂತರಸಂತೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ನಡೆದಿದೆ. ಅಂತರಸಂತೆ ಗ್ರಾಮದಲ್ಲಿ ಹಸುಗಳ ಮೇಲೆ ಹುಲಿ ದಾಳಿ ಮಾಡುತ್ತಿತ್ತು, ಇದಕ್ಕಾಗಿ ಹುಲಿಯನ್ನು ಹಿಡಿಯಲು ದಸರಾ ಆನೆ ಅರ್ಜುನನ್ನೂ ಸೇರಿದಂತೆ ನಾಲ್ಕು ಆನೆಗಳನ್ನು ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು. ಈ ವೇಳೆ ಅಶೋಕ ಎಂಬ ಆನೆ ಕಾರ್ಯಾಚರಣೆ ವೇಳೆ ಪಟಾಕಿ ಶಬ್ದಕ್ಕೆ ಹೆದರಿ ಮಾವುತನನ್ನು ಕೆಳಗೆ ಕೆಡವಿ ಕಾಡಿನೊಳಗೆ ನಾಪತ್ತೆಯಾಗಿದೆ. ಹುಲಿಯನ್ನು ಹಿಡಿಯಲು ಹೋದವರು ಆನೆಯನ್ನು ಹುಡುಕುವ೦ತಾಗಿದೆ.










