ಮೈಸೂರು: ಹುಲಿ ಸೆರೆ ಕಾರ್ಯಾಚರಣೆಗೆ ಹೋಗಿ ಕಾರ್ಯಾಚರಣೆ ವೇಳೆ ಪಟಾಕಿ ಶಬ್ದಕ್ಕೆ ಹೆದರಿ ನಾಪತ್ತೆಯಾಗಿದ್ದ ಅಶೋಕ ಆನೆ ಪತ್ತೆಯಾಗಿದೆ. ಅಂತರಸಂತೆ ಗ್ರಾಮದಲ್ಲಿ ಹಸುಗಳ ಮೇಲೆ ಹುಲಿ ದಾಳಿ ಮಾಡುತ್ತಿತ್ತು, ಇದಕ್ಕಾಗಿ ಹುಲಿಯನ್ನು ಹಿಡಿಯಲು ದಸರಾ ಆನೆ ಅರ್ಜುನನ್ನೂ ಸೇರಿದಂತೆ ನಾಲ್ಕು ಆನೆಗಳನ್ನು ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು. ಈ ವೇಳೆ ಅಶೋಕ ಆನೆ ಕಾರ್ಯಾಚರಣೆ ವೇಳೆ ಪಟಾಕಿ ಶಬ್ದಕ್ಕೆ ಹೆದರಿ ಮಾವುತನನ್ನು ಕೆಳಗೆ ಕೆಡವಿ ಕಾಡಿನೊಳಗೆ ನಾಪತ್ತೆಯಾಗಿತ್ತು . ಹುಲಿಯನ್ನು ಹಿಡಿಯಲು ಹೋದ ಅಧಿಕಾರಿಗಳು ಆನೆಯನ್ನು ಹುಡುಕುವ೦ತಾಗಿತ್ತು. ಕೊನೆಗೆ ಅಶೋಕ ಆನೆ ಡಿ.ಬಿ.ಕುಪ್ಪೆ ಅರಣ್ಯ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದ್ದು, ಆನೆಯನ್ನು ಮತ್ತಿಗೋಡು ಶಿಬಿರಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.










