ರಾಹುಕಾಲ ಮುಗಿದ ನಂತರ ಕಾರಿನಿಂದ ಇಳಿದ ಎಚ್‌.ಡಿ ರೇವಣ್ಣ…

215
firstsuddi

ಬೆಳಗಾವಿ:  ಕೆಶಿಪ್‌ನ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಭಾಗವಹಿಸಲು ಆಗಮಿಸಿದ್ದ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ರಾಹುಕಾಲ  ಇದೆ ಎಂದು ಕಾರಿನಿಂದ ಇಳಿಯದೇ ಕೆಲ ಸಮಯ ಕಾರಿನಲ್ಲೇ ಕುಳಿತ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗ್ಗೆ 9.40 ಕ್ಕೆ ಆಗಮಿಸಿದ್ದ ರೇವಣ್ಣ  ಅವರು 9.54 ಕ್ಕೆ ರಾಹುಕಾಲ ಮುಗಿದ ಬಳಿಕ ಕಾರಿನಲ್ಲೇ  ಕುಳಿತು ದೇವರ ವಿಭೂತಿಯನ್ನು ಹಚ್ಚಿಕೊಂಡು ನಂತರ ಕಾರಿನಿಂದ ಕೆಳಗಿಳಿದಿದ್ದಾರೆ.