1984ರ ಸಿಖ್ ದಂಗೆ: ಸಜ್ಜನ್ ಕುಮಾರ್ ಗೆ ಜೀವಾವಧಿ ಶಿಕ್ಷೆ…

194
firstsuddi

ದೆಹಲಿ: 1984ರ ಸಿಖ್​ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 34 ವರ್ಷಗಳ ಬಳಿಕ  ಕಾಂಗ್ರೆಸ್​ ನಾಯಕ ಸಜ್ಜನ್​ ಕುಮಾರ್ ದೋಷಿ ಎಂದು ದೆಹಲಿ ಹೈಕೋರ್ಟ್​​ ತೀರ್ಪು ನೀಡಿದೆ.ಡಿಸೆಂಬರ್​ 31ರ ಒಳಗೆ  ಶರಣಾಗುವಂತೆ ಸಜ್ಜನ್​ ಕುಮಾರ್​​ ಅವರಿಗೆ ಕೋರ್ಟ್​ ಆದೇಶಿಸಿದೆ ಹಾಗೂ  ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.1984ರ ಅಕ್ಟೋಬರ್​ 31ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ದೆಹಲಿ ಕಂಟೋನ್ ಮೆಂಟ್​ ಏರಿಯಾದಲ್ಲಿ ಗಲಭೆ ನಡೆದಿತ್ತು. ಈ ವೇಳೆ ಐವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೆಹಲಿ ಹೈಕೋರ್ಟ್​​ ತೀರ್ಪು ನೀಡಿದೆ.