ವಿಷ ಪ್ರಸಾದ ಸೇವಿಸಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ…

186
firstsuddi

ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ  ಕಿಚ್ಚುಗತ್ತಿ ಮಾರಮ್ಮನ ದೇವಾಲಯದಲ್ಲಿ ಪ್ರಸಾದ ಸೇವಿಸಿ  ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ದೇವಸ್ಥಾನದ ಪ್ರಸಾದ ಸೇವಿಸಿ  ಅಸ್ವಸ್ಥರಾಗಿದ್ದ ಮೈಲಿಬಾಯಿ(37) ಯನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೈಲಿಬಾಯಿ ಇಂದು ಬೆಳಿಗ್ಗೆ   8-45ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ  ಸಾವನ್ನಪ್ಪಿದ್ದಾರೆ.  ಮೃತ ಮಹಿಳೆ ಮೈಲಿಬಾಯಿ ಅವರ ಪತಿ ಕೃಷ್ಣ ನಾಯಕ್​  ಅವರು ಮೊನ್ನೆಯಷ್ಟೇ ಸಾವನ್ನಪ್ಪಿದ್ದರು.