ಮೂಡಿಗೆರೆ: ಸರ್ವ ಧರ್ಮೀಯರ ಹಬ್ಬಗಳು,ಧಾರ್ಮಿಕ ಆಚರಣೆಗಳು ಬಂದಾಗ ಗ್ರಾಮಸ್ಥರನ್ನು ಪೋಲಿಸ್ ಠಾಣೆಗೆ ಕರೆದು ಸಭೆ ನಡೆಸುವುದು ಸರ್ವಧರ್ಮೀಯರು ಶಾಂತಿ ಸೌಹಾರ್ಧತೆಯಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಿ ಎಂಬ ಉದ್ದೇಶದಿಂದ ಆಗಿದೆ ಎಂದು ಮೂಡಿಗೆರೆ ಪೋಲಿಸ್ ವೃತ್ತ ನಿರೀಕ್ಷಕ ಎಂ.ಜಗದೀಶ್ ಹೇಳಿದರು.
ಅವರು ಬಣಕಲ್ ಪೋಲಿಸ್ ಠಾಣೆಯಲ್ಲಿ ಆಯೋಜಿಸಿದ್ದ ‘ಸರ್ವಧರ್ಮಿಯರ ಶಾಂತಿ ಸಭೆ’ಯಲ್ಲಿ ಭಾಗವಹಿಸಿ ಮಾತನಾಡಿದರು.ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕಾದರೆ ಸ್ಥಳೀಯ ಗ್ರಾಮ ಪಂಚಾಯಿತಿ,ಸ್ಥಳೀಯ ಪೋಲಿಸ್ ಠಾಣೆಯ ಗಮನಕ್ಕೆ ತಂದು ಅನುಮತಿ ಪಡೆದು ಕಾರ್ಯಕ್ರಮ ನಡೆಸುವುದು ಕಡ್ಡಾಯವಾಗಿದೆ.ಕಾರ್ಯಕ್ರಮದಲ್ಲಿ ಮೈಕ್ ಮತ್ತು ದ್ವನಿವರ್ಧಕ ಬಳಸಲು ಹಾಗೂ ಮೆರವಣಿಗೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಂದ ಪರವಾನಗಿ ಕಡ್ಡಾಯ ಪಡೆಯತಕ್ಕದ್ದು. ಯಾವುದೇ ಧರ್ಮದ ಮೆರವಣಿಗೆ ಅಥವಾ ಭಾಷಣಗಳಲ್ಲಿ ಇತರ ಧರ್ಮಿಯರ ಭಾವನೆಗಳಿಗೆ ನಿಂದನೆ ಮಾಡಿ ದಕ್ಕೆಯಾಗುವ ರೀತಿಯಲ್ಲಿ ಮಾತನಾಡುವುದನ್ನು ನಿಷೇಧಿಸಲಾಗಿದೆ.ಮೆರವಣಿಗೆ ಅಥವಾ ಧಾರ್ಮಿಕ ಇತರ ಕಾರ್ಯಕ್ರಮ ನಡೆಸುವವರು ಶಾಂತಿಯುತವಾಗಿ ನಡೆಯುವಂತೆ ಸಂಘಟಕರು ಜವಾಬ್ದಾರಿ ವಹಿಸಬೇಕು.ಮೆರವಣಿಗೆಯಲ್ಲಿ ರಸ್ತೆ ತಡೆ ಮಾಡಿ ಸಂಚಾರವನ್ನು ನಿಲ್ಲಿಸುವಂತಿಲ್ಲ.ತಮ್ಮ ಯಾವುದೇ ಧರ್ಮದ ಬ್ಯಾನರ್,ಬಂಟಿಂಗ್ಸ್‍ಗಳನ್ನು ಇತರೆ ಧರ್ಮದ ದೇವಸ್ಥಾನ,ಮಸೀದಿ,ಚರ್ಚ್‍ಗಳ ಬಳಿ ಅಳವಡಿಸುವಂತಿಲ್ಲ. ಡಿಜೆ ಬಳಸಲು ಅನುಮತಿಯಿಲ್ಲದ ಕಾರಣ ಸಂಘಟಕರು ಪಡೆದ ಪರವಾನಗಿಯಲ್ಲಿ ಎಲ್ಲಾ ನಿಯಮಗಳನ್ನು ನೀಡಲಾಗಿದ್ದು ಅವುಗಳನ್ನು ಚಾಚು ತಪ್ಪದೇ ನಿಯಮಾನುಸಾರ ಪಾಲಿಸುವುದರಿಂದ ಧಾರ್ಮಿಕ ಆಚರಣೆಗಳು ಶಾಂತಿಯುತವಾಗಿ ನಡೆಯುತ್ತವೆ.ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಬಣಕಲ್ ಎಎಸೈ ಸಣ್ಣತಿಮ್ಮಪ್ಪ ಮಾತನಾಡಿ ದತ್ತ ಜಯಂತಿಯು 21 ಮತ್ತು 22 ರಂದು ಇರುವುದರಿಂದ ಗಡಿಭಾಗದಲ್ಲಿ ಈಗಾಗಲೇ ನಾಕಾ ಬಂಧಿಗಳನ್ನು ಹಾಕಲಾಗಿದ್ದು, ದತ್ತ ಜಯಂತಿ ಶಾಂತಿಯುತವಾಗಿ ನಡೆಯಬೇಕೆಂಬ ಉದ್ದೇಶದಿಂದ ಗಡಿಭಾಗದ ವಾಹನಗಳನ್ನು ದತ್ತಜಯಂತಿ ಸಂದರ್ಭದಲ್ಲಿ ಮಾಹಿತಿ ಕಲೆಹಾಕಿ ತಪಾಸಣೆ ಮಾಡಿ ವಾಹನಗಲನ್ನು ಬಿಡಲಾಗುತ್ತದೆ. ದತ್ತ ಜಯಂತಿ ಮುಗಿಸಿ ದತ್ತಮಾಲಾಧಾರಿಗಳು ವಾಪಾಸ್ ಹೋಗುವಾಗ ಕೊಟ್ಟಿಗೆಹಾರದಲ್ಲಿ 22 ರಂದು ಸಂಜೆ 4 ಗಂಟೆಯಿಂದ ಕಾನೂನು ಸುವ್ಯವಸ್ಥೆಯ ದಿಸೆಯಲ್ಲಿ ಅಂಗಡಿಮುಂಗಟ್ಟು ಮುಚ್ಚಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ಆದೇಶ ಬಂದ ನಂತರವಷ್ಟೇ ವರ್ತಕರಿಗೆ ತಿಳಿಸಲಾಗುವುದು ಎಂದರು.
ಶಾಂತಿ ಸಭೆಯಲ್ಲಿ ಮುಖ್ಯ ಪೋಲಿಸ್ ಅಧಿಕಾರಿ ರುದ್ರೇಶ್,ಭಜರಂಗ ದಳದ ಹೋಬಳಿ ಸಂಚಾಲಕ ವಿನಯ್ ಶೆಟ್ಟಿ,ಬಣಕಲ್ ಗ್ರಾ.ಪಂ.ಅಧ್ಯಕ್ಷ ಬಿ.ವಿ.ಸುರೇಶ್,ಸದಸ್ಯ ಸತೀಶ್,ಕೋಮು ಸೌಹಾರ್ಧ ವೇದಿಕೆಯ ಹಸನಬ್ಬ,ಮಸೀದಿ ಸದಸ್ಯ ಅಹಮ್ಮದ್‍ಬಾವಾ,ಮೊಹಮ್ಮದ್‍ಆಲಿ,ರಿಯಾಜ್,ಇಜಾಜ್ ಅಹಮ್ಮದ್,ಪ್ರಮುಖರಾದ ಬಿ.ಶಿವರಾಂ ಶೆಟ್ಟಿ, ಜೆಸಿಐನ ಸುರೇಶ್‍ಶೆಟ್ಟಿ, ಗುಡ್ಡೆಟ್ಟಿ ರಮೇಶ್‍ಗೌಡ,ಭಜರಂಗದಳದ ಕಾರ್ಯಕರ್ತ ಚಿರಾಗ್,ಸಮಾಜ ಸೇವಕ ಮಹಮ್ಮದ್ ಆರೀಪ್, ಪಿಎಪ್‍ಐ ಸದಸ್ಯರಾದ ಅಜೀಜ್,ಆತೀಪ್ ಮತ್ತಿತರರು ಇದ್ದರು.
Home ಸ್ಥಳಿಯ ಸುದ್ದಿ ಮೆರವಣಿಗೆ ಅಥವಾ ಧಾರ್ಮಿಕ ಇತರ ಕಾರ್ಯಕ್ರಮ ನಡೆಸುವವರು ಶಾಂತಿಯುತವಾಗಿ ನಡೆಯುವಂತೆ ಸಂಘಟಕರು ಜವಾಬ್ದಾರಿ ವಹಿಸಬೇಕು :...










