ಬೆಂಗಳೂರು:ಸೂಲಗಿತ್ತಿ ನರಸಮ್ಮ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದು, ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮ ನಿಧನ ಅತೀವ ನೋವನ್ನುಂಟು ಮಾಡಿದೆ.ವೈದ್ಯರಿಲ್ಲದ ಕಾಲದಲ್ಲಿ 15 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಮಹಾತಾಯಿಯಾಗಿದ್ದರು ಸೂಲಗಿತ್ತಿ ನರಸಮ್ಮಅವರ ಅಗಲಿಕೆ ಸಮಾಜಕ್ಕೆ ನಷ್ಟ, ಅವರ ಆತ್ಮಕ್ಕೆ ಶಾಂತಿ ಸಿಗಲಿ,ದೇವರು ಅವರ ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.
ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮ ನಿಧನ ಅತೀವ ನೋವನ್ನುಂಟು ಮಾಡಿದೆ.ವೈದ್ಯರಿಲ್ಲದ ಕಾಲದಲ್ಲಿ 15 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಮಹಾತಾಯಿಯಾಗಿದ್ದರು ಸೂಲಗಿತ್ತಿ ನರಸಮ್ಮ
ಅವರ ಅಗಲಿಕೆ ಸಮಾಜಕ್ಕೆ ನಷ್ಟ, ಅವರ ಆತ್ಮಕ್ಕೆ ಶಾಂತಿ ಸಿಗಲಿ,ದೇವರು ಅವರ ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ pic.twitter.com/0CMpEHES3B
— CM of Karnataka (@CMofKarnataka) December 25, 2018
ಸೂಲಗಿತ್ತಿ ನರಸಮ್ಮ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದು, ಉಸಿರಾಟದ ತೊಂದರೆಯಿಂದ ಸೂಲಗಿತ್ತಿ ನರಸಮ್ಮರವರು ನಿಧನರಾದ ಸುದ್ದಿ ನೋವು ತರಿಸಿದೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಬೆಳಗ್ಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೆ. ಹಳ್ಳಿಗಳಲ್ಲಿ 15000 ಹೆರಿಗೆ ಮಾಡಿಸಿದ ಇವರ ಸೇವೆಗೆ ಪದ್ಮಶ್ರೀ ದೊರಕಿತ್ತು. ಇವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ನೀಡಲಿ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.
ಉಸಿರಾಟದ ತೊಂದರೆಯಿಂದ ಸೂಲಗಿತ್ತಿ ನರಸಮ್ಮರವರು ನಿಧನರಾದ ಸುದ್ದಿ ನೋವು ತರಿಸಿದೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಬೆಳಗ್ಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೆ. ಹಳ್ಳಿಗಳಲ್ಲಿ 15000 ಹೆರಿಗೆ ಮಾಡಿಸಿದ ಇವರ ಸೇವೆಗೆ ಪದ್ಮಶ್ರೀ ದೊರಕಿತ್ತು. ಇವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ನೀಡಲಿ pic.twitter.com/9XeLnFfUBm
— B.S. Yeddyurappa (@BSYBJP) December 25, 2018










