ಕಡೂರು: ಕುಡಿಯುವ ನೀರಿನ ಟ್ಯಾಂಕ್ ಸುಚಿತ್ವ ವಿಚಾರಕ್ಕೆ sಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಪುರುಷರು ಮಹಿಳೆಯರು ಎನ್ನದೆ ಬಡಿದಾಡಿಕೊಂಡಿರುವ ಘಟನೆ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರು ಬಿಡದಿದ್ದಕ್ಕೆ ಗೊಲ್ಲರಹಟ್ಟಿ ಗ್ರಾಮದ ಜನ ವಾಟರ್ ಮ್ಯಾನ್ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ವಾಟರ್ ಮ್ಯಾನ್ ಗುಂಪು ಹಾಗೂ ಗೊಲ್ಲರ ಹಟ್ಟಿಯ ಜನರು ಗ್ರಾಮದ ಪಿಡಿಓ ಎದುರಲ್ಲೇ ಬಡಿದಾಡಿಕೊಂಡಿದ್ದಾರೆ. ಜಗಳದಲ್ಲಿ ಗೊಲ್ಲರ ಹಟ್ಟಿಯ ಓರ್ವ ವ್ಯಕ್ತಿ ಅಸ್ವಸ್ಥನಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಠಾಣೆಗೆ ಎರಡೂ ಕಡೆಯವರು ದೂರು ನೀಡಿದ್ದು, ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










