ಸ್ಯಾಂಡಲ್ ವುಡ್ ನ ಖ್ಯಾತ ನಟ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ…

242
firstsuddi

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಸ್ಯಾಂಡಲ್​ವುಡ್​ ನ ಪ್ರಸಿದ್ಧ ನಟ, ನಿರ್ಮಾಪಕರ ಮನೆ ಮೇಲೆ  ಐಟಿ ಇಲಾಖೆ  ದಾಳಿ ನಡೆಸಿ ಬಿಗ್  ಶಾಕ್ ನೀಡಿದೆ. ಮಾನ್ಯತಾ ಟೆಕ್ ಪಾರ್ಟ್ ಬಳಿಕ ಶಿವರಾಜ್ ಕುಮಾರ್ ನಿವಾಸ, ಬೆಂಗಳೂರಿನ ಸದಾಶಿವನಗರದ ಪುನೀತ್ ರಾಜ್​ಕುಮಾರ್ ನಿವಾಸ, ಮಹಾಲಕ್ಷ್ಮಿ ಲೇಟ್ ಔಟ್ ನಲ್ಲಿರುವ ರಾಕ್ ಲೈನ್ ವೆಂಕಟೇಶ್ ಅವರ ನಿವಾಸ , ನಿರ್ಮಾಪಕ ಜಯಣ್ಣ ನಿವಾಸ,  ಕಿಚ್ಚ ಸುದೀಪ್‌ ನಿವಾಸ , ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್​. ಮನೋಹರ್ ನಿವಾಸ , ಕೆಜಿಎಫ್ ಖ್ಯಾತಿಯ ನಿರ್ಮಾಪಕ ವಿಜಯ್‌ ಕಿರಗಂದೂರು  ನಿವಾಸ, ರಾಕಿಂಗ್ ಸ್ಟಾರ್ ಯಶ್​ ನಿವಾಸದ  ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.