ನೀವು ಸರ್ಕಾರಿ ನೌಕರರಾದರೆ ನಾವು ಲೋಕ ನೌಕರರು: ಕೆ.ಸಿ.ರತನ್ ಕುಮಾರ್ …

520
firstsuddi

ಮೂಡಿಗೆರೆ : ಸರ್ಕಾರಿ ಅಧಿಕಾರಿಗಳು ಯಾವುದೇ ತಪ್ಪು ಮಾಡಿದರೆ ಅದನ್ನು ತಿದ್ದುವವರು ನಾವುಗಳು ಅದಕ್ಕಾಗಿಯೇ ನಮ್ಮನ್ನು ಲೋಕ ನೌಕರನ್ನುತ್ತಾರೆ ಎಂದು ಅಧಿಕಾರಿಗಳಿಗೆ ತಾ.ಪಂ.ಅಧ್ಯಕ್ಷರಾದ ಕೆ.ಸಿ.ರತನ್ ಕುಮಾರ್ ಕಿವಿ ಮಾತನ್ನು ಹೇಳಿದರು.
ಅವರು ತಾಲ್ಲೂಕು ಪಂಚಾಯಿತಿ ಆವರಣದ ಪೂರ್ಣ ಚಂದ್ರ ತೇಜಸ್ವಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅಧಿಕಾರಿಗಳು ಯಾವುದಾದರು ಕಾಮಗಾರಿನ್ನು ಆರಂಭಿಸುವ ಮೊದಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತಂದು ಕಾಮಗಾರಿಯನ್ನು ಅನುಷ್ಠಾನಗೊಳಿಸಿ ಅದನ್ನು ಬಿಟ್ಟು ಕಾಮಗಾರಿಯ ಬಗ್ಗೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು ಮಾಹಿತಿ ಕೇಳಿದಲ್ಲಿ ಅವರಲ್ಲಿ ನಿಮ್ಮಗಳ ದರ್ಪವನ್ನು ತೋರಬೇಡಿ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ತಾಕಿತು ಮಾಡಿದರು.
ಬಣಕಲ್ ಇಂದಿರಾ ನಗರದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇವರ ವ್ಯಾಪ್ತಿಗೆ ಸಂಬಂಧಿಸಿದ ಪಿ.ಡಬ್ಲ್ಯೂ.ಡಿ ಅಭಿಯಂತರರಾದ ಶರಣ್ಣಪ್ಪರವರಲ್ಲಿ ಕಾಮಗಾರಿಯ ಬಗ್ಗೆ ಮಾಹಿತಿ ಕೇಳಿದ ಸಂದರ್ಭದಲ್ಲಿ ಅವರು ನಿಮಗೆ ಮಾಹಿತಿ ಬೇಕಾದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಲ್ಲಿ ಮಾಹಿತಿ ಕೇಳಿ ಎಂದು ಉಡಾಫೆಯ ಉತ್ತರವನ್ನು ಕೊಟ್ಟಿರುತ್ತಾರೆ ಇದರ ಬಗ್ಗೆ ಅಧ್ಯಕ್ಷರು ಪರಿಗಣಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದಾಗ ಪ್ರತಿಕ್ರಯಿಸಿದ ಅಧ್ಯಕ್ಷರು ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಯಾವುದಾದರು ವಿಷಯದ ಬಗ್ಗೆ ಮಾಹಿತಿ ಕೇಳಿದ್ದಲ್ಲಿ ಅವರಿಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿ ಇದರ ಬಗ್ಗೆ ಹೆಚ್ಚಿನ ಅದ್ಯಯನಕ್ಕಾಗಿ ಪ್ರತಿಯೊಬ್ಬ ಅಧಿಕಾರಿಗಳು ಪಂಚಾಯತ್ ರಾಜ್ ಕಾಯ್ದೆಯ ಪುಸ್ತಕವನ್ನು ಓದಿ ಎಂದು ಹೇಳಿದರು.
ಅಧಿಕಾರಿಗಳು ನೀವು ಮಾಡಿದ ತಪ್ಪನ್ನು ನೀವು ಮೊದಲು ತಿದ್ದಿಕೊಳ್ಳಿ ನಂತರ ನೀವು ವಾದವನ್ನು ಮಾಡಿ ಇನ್ನು ಮೇಲೆ ಇಂತಹ ತಪ್ಪುಗಳು ಮರುಕಳಿಸಿದ್ದಲ್ಲಿ ವಿಚಾರದ ಬಗ್ಗೆ ತಾ.ಪಂ.ಇವೋ ಮತ್ತು ಜಿಲ್ಲಾ ಪಂಚಾಯಿತಿ ಸಿ.ಇ.ಓ ಗಳಿಗೆ ತಾಲ್ಲೂಕು ಪಂಚಾಯಿತಿ ನಿರ್ಣಯದಂತೆ ಪತ್ರ ಬರೆದು ಸೂಕ್ತ ಕ್ರಮಕ್ಕಾಗಿ ಒತ್ತಾಹಿಸಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯದ ಕುರಿತು ಪ್ರಸ್ಥಾಪ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಕಡಕ್ ವಾರ್ನಿಂಗ್ ನೀಡಿದರು.
ಶುದ್ದ ಗಂಗಾ ಕುಡಿಯುವ ನೀರಿನ ಘಟಕಗಳು ನಿರ್ಮಾಣಗೊಂಡು ಕೆಲವು ತಿಂಗಳುಗಳೇ ಕಳೆದರು ಇನ್ನು ಉದ್ಘಾಟನೆ ಗೊಂಡಿರುವುದಿಲ್ಲ ಇದರ ಬಗ್ಗೆ ಚುನಾಯಿತ ಪ್ರತಿನಿಧಿಗಳನ್ನು ಕರೆದು ಇದರ ಉದ್ಘಾಟನೆಯ ದಿನಾಂಕ ನಿಗದಿಗೊಳಿಸಿ ಇನ್ನು ಮೂರು ದಿನಗಳ ಒಳಗೆ ನನಗೆ ಸ್ಪಷ್ಟ ಲಿಖಿತ ಉತ್ತರವನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ತಾಕೀತು ಮಾಡಿದರು.
ಕಳಸದಲ್ಲಿ ಅಲ್ಲಿಯ ಗ್ರಾಮಸ್ಥರ ಮನೆಯ ಮೇಲೆಯೇ ವಿದ್ಯುತ್ ಕಂಬವನ್ನು ಮನೆಯ ಹೆಂಚಿನ ಎತ್ತರಕ್ಕೆ ಅಳವಡಿಸಿದ್ದು ಇದನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಬಗ್ಗೆ ಈ ಮುಂಚಿತವಾಗಿ ಹಲವಾರು ಸಭೆಯಲ್ಲಿ ಅಲ್ಲಿನ ಮೆಸ್ಕಾಂ ಎ.ಈ.ಈ ಮಂಜುನಾಥ್‍ಗೆ ತಿಳಿಸಿದ್ದು ಆದರೆ ಈ ಕೆಲಸವನ್ನು ಕೈಗೆತ್ತಿಕೊಂಡಿರುವುದಿಲ್ಲ ಇದರಲ್ಲಿ ಏನಾದರು ಅಪಘಾತ ಸಂಭವಿಸಿದಲ್ಲಿ ಇದಕ್ಕೆ ಅವರೇ ನೇರ ಕಾರಣರಾಗುತ್ತಾರೆ ಇದರ ಬಗ್ಗೆ ತಾ.ಪಂ.ನಿರ್ಣಯದಲ್ಲಿ ಬರೆದಿಟ್ಟುಕೊಳ್ಳಿ ಎಂದರು. ಸದಸ್ಯರು ರಸ್ತೆ ಕಾಯುವ ಕೆಲಸವನ್ನು ಮಾಡಲು ಇರುವುದಿಲ್ಲ ನಿಮಗೆ ಬೇಕಾದ ಅನುದಾನವನ್ನು ಒದಗಿಸಲು ಸರ್ಕಾರದೊಂದಿಗೆ ಚರ್ಚೆ ಮಾಡುತ್ತೇವೆ ನಿಮ್ಮ ಕೆಲಸದಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟವನ್ನ ಕಾಪಾಡಿಕೊಳ್ಳಿ ಎಂದು ಈ ಸಂದರ್ಭದಲ್ಲಿ ಕಳಸಾ ತಾ.ಪಂ.ಸದಸ್ಯರಾದ ರಫೀಕ್ ಸಬೆಯಲ್ಲಿ ಪ್ರಸ್ತಾಪಿಸಿದರು.
ವೇದಿಕೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ಉಪಾಧ್ಯಕ್ಷರಾದಂತಹ ಸವಿತಾ ರಮೇಶ್, ಸ್ಥಾಯಿ ಸಮೀತಿ ಅಧ್ಯಕ್ಷರಾದಂತಹ ಸುಂದರ್ ಕುಮಾರ್, ಸದಸ್ಯರಾದಂತಹ ರಂಜನ್ ಅಜಿತ್ ಕುಮಾರ್, ರಾಜೇಂದ್ರ ಹಿತ್ತಲಮಕ್ಕಿ, ಭಾರತಿ ರವೀಂದ್ರ, ವೇದಾವತಿ ಲಕ್ಷಣ, ಮೀನಾಕ್ಷಿ, ಹಾಗು ಇತರ ಸದಸ್ಯರುಗಳಿದ್ದರು.